ಮಾಜಿ ಪ್ರಧಾನಿಗಿಲ್ಲ ಎಸ್ಪಿಜಿ ಭದ್ರತೆ

324

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ನೀಡಲಾಗ್ತಿದ್ದ ಎಸ್ಪಿಜಿ ಭದ್ರತೆಯನ್ನ ಹಿಂದಕ್ಕೆ ಪಡೆಯಲಾಗಿದೆ. ಆದ್ರೆ, ಝಡ್ ಪ್ಲಸ್ ಭದ್ರತೆಯನ್ನ ಇವರಿಗೆ ನೀಡಲಾಗ್ತಿದೆ.

ವಿವಿಧ ಭದ್ರತಾ ಸಂಸ್ಥೆಗಳು ಮೂರು ತಿಂಗಳು ನಡೆಸಿದ ಅಧ್ಯಯನದ ಬಳಿಕ ಕೇಂದ್ರ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಇನ್ನು ಝಡ್ ಪ್ಲಸ್ ಭದ್ರತೆಯನ್ನ ಸಿಆರ್ಪಿಎಫ್ ನಿರ್ವಹಿಸುತ್ತದೆ. ಈ ಬಗ್ಗೆ ಮಾಜಿ ಪ್ರದಾನಿ ಸಿಂಗ್ ಅವರಿಗೆ ತಿಳಿಸಲಾಗಿದೆ ಎಂದು ಗೃಹಸಚಿವಾಲಯ ತಿಳಿಸಿದೆ.

ಎಸ್ಪಿಜಿ ಕಾಯ್ದೆ 1988ರ ನಿಯಮದಂತೆ ಮನಮೋಹನ ಸಿಂಗ್ ಅವರ ಪ್ರಧಾನಿ ಹುದ್ದೆಯನ್ನ ನಿರ್ಗಮಿಸಿದ ಬಳಿಕವೂ ಒಂದು ವರ್ಷ ಎಸ್ಪಿಜಿ ಭದ್ರತೆ ನೀಡಲಾಗಿತ್ತು. ಇದೀಗ ಅದನ್ನ ಹಿಂಪಡೆದು ಝಡ್ ಪ್ಲಸ್ ಭದ್ರತೆ ನೀಡಲು ಕೇಂದ್ರವು ತೀರ್ಮಾನಿಸಿದೆ.




Leave a Reply

Your email address will not be published. Required fields are marked *

error: Content is protected !!