Search

‘ರಾಬರ್ಟ್’ಗೆ ಹುಡ್ಗಿ ಸಿಕ್ಕಳು!

1102

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ನಟನೆಯ ರಾಬರ್ಟ್ ಸಿನ್ಮಾದ ಶೂಟಿಂಗ್ ಶುರುವಾಗಿದೆ. ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಎರಡನೇ ಹಂತದ ಶೂಟಿಂಗ್ ಗೆ ಸಿದ್ಧತೆ ನಡೆದಿದೆ. ಇದರ ನಡುವೆ ರಾಬರ್ಟ್ ಗೆ ಜೋಡಿಯಾಗಿ ಯಾರು ಕಾಣಿಸಿಕೊಳ್ತಾರೆ ಅನ್ನೋ ಕುತೂಹಲವಿತ್ತು. ಅದಕ್ಕೆ ಇದೀಗ ತೆರೆ ಬಿದ್ದಿದೆ.

ತೆಲುಗು ಸಿನ್ಮಾದಲ್ಲಿ ಮಿಂಚುತ್ತಿರುವ ನಟಿ ಮೆಹರಿನ್ ಪಿರ್ಜಾದಾ ರಾಬರ್ಟ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ. ಈ ಸುದ್ದಿ ಇದೀಗ ಹೊರ ಬಿದ್ದಿದ್ದು ದರ್ಶನ ಅಭಿಮಾನಿಗಳಲ್ಲಿ ಮೂಡಿದ್ದ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಸೆಪ್ಟಂಬರ್ ಎರಡನೇ ವಾರದಿಂದ ಮುಂದಿನ ಹಂತದ ಶೂಟಿಂಗ್ ಶುರುವಾಗ್ಲಿದ್ದು, ಅದರಲ್ಲಿ ನಟಿ ಮೆಹರಿನ್ ಪಿರ್ಜಾದಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

ಈಗಾಗ್ಲೇ ಫೋಸ್ಟ್ ರಿನಿಂದ ಕ್ರೇಜ್ ಕ್ರಿಯೇಟ್ ಮಾಡಿರುವ ರಾಬರ್ಟ್, ಟೀಸರ್ ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ತರುಣ ಸುಧೀರ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!