ಮತ್ತೆ ಮಾರುತಿ ಅವತಾರವೆತ್ತಿದ ‘ರಾಬರ್ಟ್’

391

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಮೂವಿ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲೆರಡು ಪೋಸ್ಟರ್ ಲುಕ್ ನಿಂದಲೇ ಫ್ಯಾನ್ಸ್ ದಿಲ್ ಖುಷ್ ಆಗಿದೆ. ಇದೀಗ ಮತ್ತೊಂದು ಲುಕ್ ಬಿಟ್ಟಿದ್ದು ಭರ್ಜರಿ ಸೌಂಡ್ ಮಾಡ್ತಿದೆ.

ಸಂಕ್ರಾಂತಿ ಹಬ್ಬಕ್ಕೆ ಡಿ ಬಾಸ್ ಅಭಿಮಾನಿಗಳಿಗೆ ಗಿಫ್ಟ್ ನೀಡಲಾಗಿದ್ದು, ಎರಡನೇ ಬಾರಿಗೆ ಮಾರುತಿ ಅವತಾರ ಎತ್ತಿ ಬಂದಿದ್ದಾರೆ. ಜೈ ಶ್ರೀರಾಮ ಡಿಸೈನ್ ನಲ್ಲಿ ಅಬ್ಬರಿಸ್ತಿರುವ ಪೋಸ್ಟರ್ ನಲ್ಲಿ ದರ್ಶನ ಆಂಜನೇಯ ರೂಪದಲ್ಲಿದ್ದು ಹೆಗಲ ಮೇಲೆ ಬಾಲರಾಮನಿದ್ದಾನೆ. ರಾಬರ್ಟ್ ಅನ್ನೋ ಟೈಟಲ್ ಇರುವ ಚಿತ್ರದಲ್ಲಿ ರಾಮ, ಹನುಮನ ಅವತಾರ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ.

ರಾಬರ್ಟ್ ಚಿತ್ರದಲ್ಲಿ ದರ್ಶನ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗ್ತಿದೆ. ಇದೀಗ ಎರಡು ಶೇಡ್ ಗಳ ಪೋಸ್ಟರ್ ರಿಲೀಸ್ ಆಗಿದ್ದು, ಮೂರನೇ ಗೆಟಪ್ ಯಾವುದು ಅನ್ನೋ ಕುತೂಹಲ ಮೂಡಿದೆ. ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು ಹಾಡುಗಳ ಶೂಟಿಂಗ್ ಒಂದಿಷ್ಟು ಬಾಕಿ ಉಳಿದಿದೆ. ಪೋಸ್ಟ್ ಪ್ರೊಡೆಕ್ಷನ್ ಕೆಲಸದಲ್ಲಿ ಬ್ಯುಸಿಯಿದ್ದು ಏಪ್ರಿಲ್ ನಲ್ಲಿ ರಾಬರ್ಟ್ ಎಂಟ್ರಿಯಾಗುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!