‘ರಾಬರ್ಟ್’ನ ಮತ್ತೊಬ್ಬಳು ಬ್ಯೂಟಿ ಇವಳೇ

504

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಗೆ ಮತ್ತೊಬ್ಬಳು ನಾಯಕಿ ಸಿಕ್ಕಿದ್ದಾಳೆ. ಡಿ ಬಾಸ್ ಸಿನ್ಮಾದ ಮೂಲಕ ಚಂದನವನದ ಮತ್ತೊಬ್ಳು ಚಂದದ ನಟಿಗೆ ಬಿಗ್ ಪ್ಲಾಟ್ ಫಾರಂ ಸಿಕ್ಕಿದೆ. ಈ ಮೂಲಕ ಒಟ್ಟು ನಾಲ್ವರು ನಾಯಕಿಯರು ಚಿತ್ರದಲ್ಲಿರುವುದು ಪಕ್ಕಾ ಆಗಿದೆ.

ಪೂಜಾ ಹೆಗ್ಡೆ, ಆಶಾ ಭಟ್, ತೇಜಶ್ವಿನಿ ಪ್ರಕಾಶ ಹಾಗೂ ಇದೀಗ ಐಶ್ವರ್ಯ ಪ್ರಸಾದ ಅನ್ನೋ ನಟಿ ಸೇರ್ಪಡೆಯಿಂದ ರಾಬರ್ಟ್ ಚಿತ್ರದಲ್ಲಿ ನಾಲ್ವರು ನಟಿಯರು ಕಾಣಿಸಿಕೊಳ್ತಿದ್ದಾರೆ. ಇದರಲ್ಲಿ ಇನ್ನೊಂದು ವಿಶೇಷ ಅಂದ್ರೆ, ಈ ನಾಲ್ವರು ನಟಿಯರು ಕನ್ನಡತಿಯರು.

ಮೈಸೂರು ಮೂಲದ ಐಶ್ವರ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ರಾಬರ್ಟ್ ಟೀಂನಿಂದ ನಟಿಗೆ ಶುಭಾಶಯ ಕೋರಿ ಪೋಸ್ಟರ್ ವೊಂದು ರಿಲೀಸ್ ಮಾಡಲಾಗಿದೆ. ಈಗಾಗ್ಲೇ ರಾಬರ್ಟ್ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಆದ್ರೆ, ನಟಿ ಐಶ್ವರ್ಯ ಎಂಟ್ರಿ ಬಗ್ಗೆ ಇಂದು ತಿಳಿಸಲಾಗಿದೆ. ಕಾರಣ, ಇಂದು ನಟಿಯ ಹುಟ್ಟು ಹಬ್ಬ. ಹೀಗಾಗಿ ಜನವರಿ 26ಕ್ಕೆ ನ್ಯೂ ಪೋಸ್ಟರ್ ರಿಲೀಸ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!