ಭಾರತಕ್ಕೆ 133 ರನ್ ಟಾರ್ಗೆಟ್

312

ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ 133 ರನ್ ಗಳ ಟಾರ್ಗೆಟ್ ನೀಡಲಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಟೀಂ ಇಂಡಿಯಾದ ಭರ್ಜರಿ ಬೌಲಿಂಗ್ ನಿಂದಾಗಿ ಸಾಧಾರಣ ಮೊತ್ತ ದಾಖಲಿಸಿದೆ.

ಮಾರ್ಟಿನ್ ಗುಪ್ಟಿಲ್ 33 ರನ್ ಗರಿಷ್ಠ ಸ್ಕೋರ್ ಆಗಿದೆ. ಮುನ್ರೋ 26, ಕ್ಯಾಪ್ಟನ್ ವಿಲಿಯಮ್ಸನ್ 14, ಗ್ರ್ಯಾಂಡ್ ಹೋಮ್ 3 ಹಾಗೂ ಟೇಲರ್ 18 ರನ್ ಗಳಿಸಿ ಔಟ್ ಆದ್ರು. ಹೀಗಾಗಿ ಕಿವೀಸ್ ಪಡೆ 5 ವಿಕೆಟ್ ನಷ್ಟಕ್ಕೆ 132 ರನ್ ಗಳ ಅಲ್ಪ ಮೊತ್ತ ಗಳಿಸಿತು. ಭಾರತ ಪರ ಜಡೇಜಾ 2, ಬೂಮ್ರಾ, ಠಾಕೂರ್, ದುಬೆ ತಲಾ ಒಂದು ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!