180 ರನ್ ಟಾರ್ಗೆಟ್ ನೀಡಿದ ಭಾರತ

337

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೆಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ 3ನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 180 ರನ್ ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಭಾರತಕ್ಕೆ ಮೊದಲು ಅವಕಾಶ ನೀಡಿತು.

ಹಿಂದಿನ ಎರಡು ಪಂದ್ಯಗಳಲ್ಲಿ ಫೇಲ್ ಆಗಿದ್ದ ರೋಹಿತ ಶರ್ಮಾ ಇಂದು ಭರ್ಜರಿ 65 ರನ್ ಬಾರಿಸಿದ. 3 ಸಿಕ್ಸ್, 6 ಫೋರ್ ಸೇರಿದಂತೆ 65 ರನ್ ಗಳಿಸಿ ಔಟ್ ಆದ. ಕೆ.ಎಲ್ ರಾಹುಲ ಹೆಚ್ಚು ಕಾಲ ಕ್ರಿಸ್ ನಲ್ಲಿ ನಿಲ್ಲದೆ ಕೇವಲ 27 ರನ್ ಬಾರಿಸಿ ಗ್ರ್ಯಾಂಡ್ ಹೋಮ್ ಬೌಲಿಂಗ್ ನಲ್ಲಿ ಔಟ್ ಆದ. ಶಿವಂ ದುಬೆ 3 ರನ್, ಕ್ಯಾಪ್ಟನ್ ಕೊಹ್ಲಿ 38 ರನ್, ಶ್ರೇಯಸ ಅಯ್ಯರ 17 ಬಾರಿಸಿದ್ರು. ಪಾಂಡೆ 14 ಹಾಗೂ ಜಡೇಜಾ 10 ರನ್ ಗಳಿಸಿ ನಾಟ್ ಔಟ್ ಆಗಿಯಿಳಿದ್ರು.

ನ್ಯೂಜಿಲೆಂಡ್ ಪರ ಹಮಿಸ್ ಬೆನೆಟ್ ಬೆಸ್ಟ್ ಬೌಲಿಂಗ್ ಮಾಡಿ 4 ಓವರ್ ಗೆ 54 ರನ್ ನೀಡಿ 3 ವಿಕೆಟ್ ಪಡೆದ. ಗ್ರ್ಯಾಂಡ್ ಹೋಮ್ ಹಾಗೂ ಮಿಚಲ್ ತಲಾ 1 ವಿಕೆಟ್ ಪಡೆದ್ರು. ಬ್ಯಾಟಿಂಗ್ ಮಾಡ್ತಿರುವ ನ್ಯೂಜಿಲೆಂಡ್ 3 ಓವರ್ ಗೆ 26 ರನ್ ಗಳಿಸಿದೆ.




Leave a Reply

Your email address will not be published. Required fields are marked *

error: Content is protected !!