ಭಾರತಕ್ಕೆ ಭರ್ಜರಿ ಗೆಲುವು

315

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಕಿವೀಸ್ ನೀಡಿದ್ದ 133 ರನ್ ಗಳ ಸಾಧಾರಣ ಟಾರ್ಗೆಟ್ ನ್ನ 17.3 ಓವರ್ ಗಳಲ್ಲಿಯೇ ಚೇಸ್ ಮಾಡಿ ವಿಜಯ ಸಾಧಿಸಿದೆ.

ಆರಂಭಿಕ ಆಟಗಾರ ರೋಹಿತ ಶರ್ಮಾ ಮತ್ತೆ ಫೇಲ್ ಆಗಿದ್ದಾರೆ. ಕೇವಲ 8 ರನ್ ಬಾರಿಸಿ ಸೌಥಿ ಬೌಲಿಂಗ್ ನಲ್ಲಿ ಟೇಲರ್ ಗೆ ಕ್ಯಾಚ್ ಕೊಟ್ಟು ಔಟ್ ಆದ್ರು. ಅಲ್ದೇ, ಕ್ಯಾಪ್ಟನ್ ವಿರಾಟ ಕೊಹ್ಲಿ ಸಹ ಸೌಥಿ ಬೌಲಿಂಗ್ ನಲ್ಲಿ ಔಟ್ ಆದಾಗ 11 ರನ್ ಮಾತ್ರ ಗಳಿಸಿದ್ರು.

ಇತ್ತ ಕ್ರಿಸ್ ನಲ್ಲಿ ಗಟ್ಟಿಯಾಗಿ ನಿಂತಿದ್ದ ಕನ್ನಡಿಗ ಕೆ.ಎಲ್ ರಾಹುಲ ಭರ್ಜರಿಯಾಗಿ 57 ರನ್ ಗಳಿಸಿದ್ದಾರೆ. 50 ಬೌಲ್ ಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ ಗಳಿಂದ 57 ರನ್ ಬಾರಿಸಿ ನಾಟ್ ಔಟ್ ಉಳಿದ್ರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಶ್ರೇಯಸ ಅಯ್ಯರ ಇಂದಿನ ಪಂದ್ಯದಲ್ಲಿಯೂ ಅಮೋಘ 3 ಸಿಕ್ಸ್, 1 ಫೋರ್ ಬಾರಿಸಿ 44 ರನ್ ಚಚ್ಚಿ ಸೌಧಿ ಬೌಲಿಂಗ್ ನಲ್ಲಿ ಔಟ್ ಆದ್ರು. ಬಳಿಕ ಬಂದ ಶಿವಂ ದುಬೆ 8 ರನ್ ಬಾರಿಸಿದ್ರು.

ಟಿಮ್ ಸೌಥಿ 2 ಹಾಗೂ ಸೌಧಿ 1 ವಿಕೆಟ್ ಪಡೆದ್ರು. 5 ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆಯನ್ನ ಭಾರತ ಸಾಧಿಸಿದೆ.




Leave a Reply

Your email address will not be published. Required fields are marked *

error: Content is protected !!