ರೈತರಿಗೆ, ಬಡವರಿಗೆ ಅಭಯ ನೀಡಿದ ಸಿಎಂ

304

ಬೆಂಗಳೂರು: ಕರೋನಾ ಭೀತಿಯಿಂದ ಕಂಗಾಲಾಗಿ ಹೋಗಿರುವ ರೈತರಿಗೆ ಹಾಗೂ ಬಡವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅಭಯ ನೀಡಿದ್ದಾರೆ. ರೈತರು ಬೆಳೆದ ದ್ರಾಕ್ಷಿ, ಕಲ್ಲಂಗಡಿ, ಟೊಮ್ಯಾಟೋ ಸೇರಿದಂತೆ ಹಣ್ಣು ಹಂಪಲು, ತರಕಾರಿಗಳನ್ನ ಸರಬರಾಜು ಮಾಡಬಹುದು ಎಂದಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಹಾಪ್ಸ್ ಕಾಮ್ ನಲ್ಲಿ ತರಕಾರಿ, ಹಣ್ಣು ಹಾಗೂ ಮೊಟ್ಟೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. 27 ರೇಷ್ಮೆ ಮಾರುಕಟ್ಟೆ ತೆರೆಯಲು ಸೂಚನೆ ನೀಡಲಾಗಿದೆ. ಅಕ್ಕಿ ಗಿರಿಣಿ ಆರಂಭಿಸಲು ಆದೇಶಿಸಲಾಗಿದೆ.

ಇನ್ನು ನಾಳೆಯಿಂದ ಪ್ರತಿದಿನ 7 ಲಕ್ಷ ಲೀಟರ್ ಹಾಲನ್ನ ಕೆಎಂಎಫ್ ನಿಂದ ಖರೀದಿಸಿ ಕೊಳಚೆ ಪ್ರದೇಶಗಳಲ್ಲಿ ವಾಸಿಸ್ತಿರುವವರಿಗೆ, ಬಡವರಿಗೆ ಉಚಿತವಾಗಿ ಏಪ್ರಿಲ್ 14ರ ವರೆಗೂ ವಿತರಿಸಲಾಗುವುದು ಎಂದಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಸಾರ್ವಜನಿಕರು ಸರ್ಕಾರದ ಜೊತೆಗೆ ಸಹಕರಿಸಬೇಕು ಎಂದಿದ್ದಾರೆ. ಇನ್ನು ಎಣ್ಣೆ ಪ್ರಿಯರಿಗೆ ಶಾಕ್ ನೀಡಿದ್ದು, ಏಪ್ರಿಲ್ 14ರ ವರೆಗೂ ನೋ ಎಣ್ಣೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!