ಕರೋನಾ ವೈರಸ್: ನಕಲಿ ಮಾತ್ರೆ ಹಂಚುತ್ತಿದ್ದ ನಕಲಿ ವೈದ್ಯನ ಮೇಲೆ ಕೇಸ್

404

ಯಾದಗಿರಿ: ಕರೋನಾ ವೈರಸ್ ಮಾತ್ರೆಗಳೆಂದು ಹೇಳಿ ನಕಲಿ ಮಾತ್ರೆಗಳನ್ನ ಉಚಿತವಾಗಿ ಹಂಚುತ್ತಿದ್ದವನ ಮೇಲೆ ಕೇಸ್ ಮಾಡಲಾಗಿದೆ. ಅಲ್ದೇ, ಈತನ ಸಹಕಾರ ನೀಡಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷನ ಮೇಲೂ ಎಫ್ಐಆರ್ ಆಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗುಂಜುನೂರನಲ್ಲಿ ಈ ಘಟನೆ ನಡೆದಿದೆ. ಶರಣಗೌಡ ಮಾಲಿಪಾಟೀಲ ಎಂಬಾತ ಸರ್ಕಾರಿ ವೈದ್ಯನೆಂದು ಹೇಳಿಕೊಂಡು ಉಚಿತವಾಗಿ ನಕಲಿ ಮಾತ್ರೆ ಹಂಚುತ್ತಿದ್ದ. ಇವನಿಗೆ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವರೆಡ್ಡಿ ಅನಪುರ ಎಂಬುವರ ಮೇಲೂ ಕೇಸ್ ಆಗಿದೆ.

ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ ಶಿವಕುಮಾರ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪೋಟೋ ಇರುವ ಪ್ಯಾಕ್ ನಲ್ಲಿ, ಹೋಮಿಯೋಪತಿ ಮಾತ್ರೆಯಿಟ್ಟು ಜನರಿಗೆ ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಜಿಲ್ಲಾಡಳಿತ ಈ ರೀತಿ ಮಾತ್ರೆ ಹಂಚಿಕೆ ಮಾಡಲು ಯಾರಿಗೂ ಹೇಳಿಲ್ಲ. ಹೀಗಾಗಿ ಕಲಂ 276, 336, 419 ಮತ್ತು 42 The Pharmacy act ಮೇಲೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಸಾರ್ವಜನಿಕರು ಸಹ ಎಚ್ಚರ ವಹಿಸಬೇಕಿದೆ. ಯಾರೋ ಉಚಿತವಾಗಿ ಮಾತ್ರೆ ಕೊಡ್ತಾರೆ ಅಂದ್ರೆ ಅದನ್ನ ನಂಬಿ ತೆಗೆದುಕೊಳ್ಳುವ ಮೊದ್ಲು ಹತ್ತು ಸಾರಿ ಯೋಚನೆ ಮಾಡಿ. ಅವರ ಪೂರ್ವಾಪರ ತಿಳಿದುಕೊಂಡು ಮುಂದುವರೆಯುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!