ದೇಶದ ಜನತೆಗೆ ಗುಡ್ ನ್ಯೂಸ್: ಸೋಂಕಿತರ ಚೇತರಿಕೆಯಲ್ಲಿ ಹೆಚ್ಚಳ

379

ನವದೆಹಲಿ: ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಾನೆ ಇದೆ. ಇದರ ಜೊತೆಗೆ ಸಾವಿನ ಸಂಖ್ಯೆ ಆತಂಕ ಮೂಡಿಸ್ತಿದೆ. ಇದರ ನಡುವೆ ಒಂದು ಗುಡ್ ನ್ಯೂಸ್ ಇದೆ. ಅದೇನು ಅಂದ್ರೆ, ಕರೋನಾದಿಂದ ದಿನದಿಂದ ದಿನಕ್ಕೆ ಗುಣಮುಖರಾಗ್ತಿರುವವರ ಪ್ರಮಾಣ ಸಹ ಹೆಚ್ಚಳವಾಗ್ತಿದೆ.

ದೇಶ್ಯಾದ್ಯಾಂತ ಸಾವಿರ ಮೇಲೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಸಂಕಷ್ಟದ ನಡುವೆ ಗುಣಮುಖರು ಸಂಖ್ಯೆ ಹೆಚ್ಚುತ್ತಿದೆ. ಇಂದು ಶೇಕಡ 13.6ರಷ್ಟು ಜನ ಚೇತರಿಸಿಕೊಂಡಿದ್ದಾರೆ. ಗುರವಾರ ಶೇಕಡ 12.2 ಇತ್ತು. ಬುಧವಾರ ಶೇಕಡ 11.41 ಇದ್ರೆ, ಮಂಗಳವಾರ ಶೇಕಡ 9.99 ಇತ್ತು. ಈ ನಾಲ್ಕು ದಿನಗಳ ಶೇಕಡಾವಾರು ನೋಡಿದ್ರೆ ಗುಣಮುಖರಾಗ್ತಿರುವವರ ಪ್ರಮಾಣ ಏರಿಕೆಯಾಗ್ತಿದ್ದು, ಒಂದಿಷ್ಟು ಖುಷಿಯ ಸಂಗತಿಯಾಗಿದೆ.

ನಂಬರ್ ಪ್ರದೇಶ ಸೋಂಕಿತರು ಸಾವು ಗುಣಮುಖ ಸೋಂಕು ಸಕ್ರಿಯ
01 ಜಗತ್ತು 2,219,164+ 149,884+ 560,912+ 1,508,368+
02 ಭಾರತ 13,835 452 1,777 11,606
03 ಕರ್ನಾಟಕ 359 13 88 258

ಈ ಖುಷಿ ಇನ್ನಷ್ಟು ಹೆಚ್ಚಾಗಬೇಕು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗಬೇಕು ಅಂದ್ರೆ, ಲಾಕ್ ಡೌನ್ ನಿಯಮವನ್ನ ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು. ಸ್ವಯಂ ಆಗಿ ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ಸರ್ಕಾರ ವಿಧಿಸಿರುವ ನಿಯಮಗಳನ್ನ ಪಾಲಿಸಬೇಕು. ಅಂದಾಗ ಆದಷ್ಟು ಬೇಗ ಕರೋನಾ ಕೊಂಡಿಯನ್ನ ಕಳಚಬಹುದು.




Leave a Reply

Your email address will not be published. Required fields are marked *

error: Content is protected !!