ಕರೋನಾ ಭಯದ ನಡುವೆ ಟೋಲ್ ಗೇಟ್ ಓಪನ್ ಗೆ ಸೂಚನೆ!

368

ನವದೆಹಲಿ: ದೇಶದಲ್ಲಿ ಕರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗ್ತಿದೆ. ಸಾವು ನೋವಿನ ಪ್ರಮಾಣ ಸಹ ಏರುಗತಿಯಲ್ಲಿ ಸಾಗುತ್ತಿದೆ. ಹೀಗಿರುವಾಗ ಇದೀಗ ಆತಂಕದ ಆದೇಶವೊಂದು ಬಂದಿದೆ.

ಮೇ 3ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಈಗ ನೋಡಿದ್ರೆ ಏಪ್ರಿಲ್ 20ರಿಂದ ಎಲ್ಲ ಟೋಲ್ ಗೇಟ್ ಓಪನ್ ಮಾಡಲು ಸೂಚಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ. ಇದು ದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸೋಂಕು ಕಡಿಮೆ ಮಾಡುವುದು ಹೇಗಪ್ಪ ಅನ್ನೋ ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಓಪನ್ ಮಾಡಿ ಅನ್ನೋದರ ಹಿಂದಿನ ಉದ್ದೇಶ ಅನ್ನೋದು ಗೊತ್ತಾಗ್ತಿಲ್ಲ. ಸಂಚಾರ ಬಂದ್ ಆಗಿದೆ. ಲಾಕ್ ಡೌನ್ ಇದೆ. ಟೋಲ್ ಗೇಟ್ ಓಪನ್ ಮಾಡಿ ಏನನ್ನ ಹೇಳಲು ಹೊರಟಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!