ಇವತ್ತಿನ ಹೆಲ್ತ್ ಬುಲೆಟಿನ್: ವಿಜಯಪುರದಲ್ಲಿ ಕ್ಯಾಮೆರಾಮನ್ ಗೆ ಸೋಂಕು

298

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ರಾಜ್ಯದಲ್ಲಿ ಮತ್ತೆ 8 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ. ಬೆಂಗಳೂರು 1, ದಕ್ಷಿಣ ಕನ್ನಡ 2, ವಿಜಯಪುರ 2, ಬಾಗಲಕೋಟೆ 2 ಹಾಗೂ ಮಂಡ್ಯದಲ್ಲಿ 1 ಕರೋನಾ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಯೂಟ್ಯೂಬ್ ಕ್ಯಾಮೆರಾಮನ್ ಗೆ ಸೋಂಕು ಕಾಣಿಸಿಕೊಂಡಿದೆ. 27 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಪೆಸೆಂಟ್ ನಂಬರ್ 511 ಎಂದು ಗುರುತಿಸಲಾಗಿದೆ. ಇನ್ನು 45 ವರ್ಷದ ವ್ಯಕ್ತಿಯಲ್ಲಿಯೂ ಬಂದಿದ್ದು, ಇದು ಪೆಸೆಂಟ್ 221ದಿಂದ ಬಂದಿದೆ.

ಇನ್ನು ರಾಜ್ಯದಲ್ಲಿ ಇದುವರೆಗೂ 19 ಜನ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಕರೋನಾ ಸೋಂಕು ಇರ್ಲಿಲ್ಲವೆಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!