ಬಿಎಲ್ ಡಿ ಆಸ್ಪತ್ರೆ ಸಿಬ್ಬಂದಿ, ಪತ್ರಕರ್ತರಲ್ಲಿ ಶುರುವಾಯ್ತು ಆತಂಕ

453

ವಿಜಯಪುರ: ಇವತ್ತಿನ ಮುಂಜಾನೆ ಹೆಲ್ತ್ ಬುಲೆಟಿನ್ ನಲ್ಲಿ 8 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ ವಿಜಯಪುರದಲ್ಲಿ 2 ಹೊಸ ಕೇಸ್ ಗಳು ದಾಖಲಾಗಿವೆ. ಈ ಇಬ್ಬರಲ್ಲಿ ಓರ್ವ ಈ ಭಾಗದ ಪ್ರತಿಷ್ಠಿತ ಬಿಎಲ್ ಡಿ ಆಸ್ಪತ್ರೆಗೆ ಬಂದಿದ್ದನಂತೆ. ಹೀಗಾಗಿ ಇದೀಗ ಇಲ್ಲಿನ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.

ಬಿಎಲ್ ಡಿ ಆಸ್ಪತ್ರೆಗೆ ಬಂದವನು ಎಕ್ಸ್ ರೇ ಸಹ ತೆಗೆಸಿಕೊಂಡಿದ್ದನಂತೆ. ಹೀಗಾಗಿ ಆತ ಆಸ್ಪತ್ರೆ ತುಂಬಾ ಓಡಾಡಿದ್ದಾನೆ. ಇದ್ರಿಂದಾಗಿ ಇದೀಗ ಇಲ್ಲಿನ ಸಿಬ್ಬಂದಿಯಲ್ಲಿ ಆತಂಕ ಮೂಡಿದೆ.

ಇನ್ನು ನಗರದ ಯೂಟ್ಯೂಬ್ ಚಾನೆಲ್ ವೊಂದರ ಕ್ಯಾಮೆರಾಮನ್ ಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ನಗರದ ಪತ್ರಕರ್ತರಲ್ಲಿ ಭಯ ಮನೆ ಮಾಡಿದೆ. ಪತ್ರಕರ್ತರಿಗೆ ಕರೋನಾ ಸೋಂಕು ಪರೀಕ್ಷೆ ನಡೆಸಲಾಗ್ತಿದ್ದು, ಕೆಲವರು ಹೋಗಿದ್ದಾರೆ. ಕೆಲವರು ಹೋಗಿಲ್ಲ ಅನ್ನೋದು ಕೇಳಿ ಬರ್ತಿದೆ. ಇದೀಗ ಕ್ಯಾಮೆರಾಮನ್ ನಲ್ಲಿ ಕಾಣಸಿಕೊಂಡ ಪರಿಣಾಮ, ಆತನ ಸಂಪರ್ಕಕ್ಕೆ ಬಂದ ಇತರೆ ಪತ್ರಕರ್ತರು, ಕ್ಯಾಮೆರಾಮನ್ ಗಳ ಪರೀಕ್ಷೆ ನಡೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!