ಇಂದು 3 ಮಕ್ಕಳು ಸೇರಿ ರಾಜ್ಯದಲ್ಲಿ 10 ಜನರಲ್ಲಿ ಸೋಂಕು

380

ಬೆಂಗಳೂರು: ಕರುನಾಡಿನಲ್ಲಿ ಕರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಧ್ಯದ ವರದಿ ಪ್ರಕಾರ ಇಂದು 4 ವರ್ಷದ ಮಗು ಸೇರಿ 10 ಜನರಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಇದ್ರಿಂದಾಗಿ ರಾಜ್ಯದಲ್ಲಿ 191 ಜನರಿಗೆ ಸೋಂಕು ತಗುಲಿದೆ. 28 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಬೆಳಗಾವಿಯ 165ನೇ ರೋಗಿಯ 4 ವರ್ಷದ ಮಗು, ಸಂಬಂಧಿಕರೊಬ್ಬರ 13 ವರ್ಷದ ಹುಡುಗ ಹಾಗೂ 9 ವರ್ಷದ ಹೆಣ್ಣು ಮಗುವಿಗೂ ಕರೋನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 19 ವರ್ಷದ ಯುವತಿ, 27 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ಬೆಳಗಾವಿಯಲ್ಲಿ 50 ವರ್ಷದ ವ್ಯಕ್ತಿ, ಚಿಕ್ಕಬಳ್ಳಾಪುರದಲ್ಲಿ 48 ವರ್ಷದ ಮಹಿಳೆ, ಮೈಸೂರಿನಲ್ಲಿ 55 ಹಾಗೂ 68 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದಿದೆ. ಇದೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಂಜೆಯೊಳಗೆ ಇದರ ಪ್ರಮಾಣ ಎಷ್ಟಾಗುತ್ತೆ ಗೊತ್ತಿಲ್ಲ. ಹೀಗೆ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗ್ತಿರುವುದು ಆತಂಕ ಮೂಡಿಸ್ತಿದೆ.




Leave a Reply

Your email address will not be published. Required fields are marked *

error: Content is protected !!