ಮೂವರು ಪತ್ರಕರ್ತರಲ್ಲಿ ಕರೋನಾ ಸೋಂಕು

972

ಮುಂಬೈ: ಕರೋನಾ ಸೋಂಕು ಅಷ್ಟು ಇಷ್ಟು ಹೈರಾಣು ಮಾಡಿಲ್ಲ. ಕೆಲವರಿಗಂತೂ ಈ ಜೀವನ ಸಾಕಪ್ಪ ಸಾಕು ಆಗಿದೆ. ಅಷ್ಟರ ಮಟ್ಟಿಗೆ ಹಿಂಡಿಹಿಪ್ಪಿ ಮಾಡಿದೆ.  ಇದೀಗ ಮೂವರು ಪತ್ರಕರ್ತರಲ್ಲಿ ಕರೋನಾ ಪಾಸಿಟಿವ್ ಪತ್ತೆಯಾಗಿದೆ.

ಮುಂಬೈನಲ್ಲಿ ಮೂವರು ಪತ್ರಕರ್ತರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇವರನ್ನ ಐಸೋಲೇಷನ್ ವಾರ್ಡ್ ಗೆ ದಾಖಲಿಲಸಾಗಿದೆ. ಇನ್ನು ಇವರ ಸಂಪರ್ಕದಲ್ಲಿದ್ದ 37 ಜನ ಸಹೋದ್ಯೋಗಿಗಳನ್ನ ಪರೀಕ್ಷೆ ಒಳಪಡಿಸಿದ್ದು ನೆಗಿಟಿವ್ ಬಂದಿದೆ. ಆದ್ರೆ, 14 ದಿನ ಗೃಹ ಬಂಧನ ಮಾಡಲಾಗಿದೆ.

ಈ ಮೂವರು ಪತ್ರಕರ್ತರು ಇತರ ಪತ್ರಕರ್ತರೊಂದಿಗೆ ಬಾಂದ್ರಾದ ಹೋಟೆಲ್‌ ವೊಂದರಲ್ಲಿ ಉಳಿದು ದಕ್ಷಿಣ ಮುಂಬೈಯಲ್ಲಿ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಇವರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಇವರೆಗೆ 2,334 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. 160 ಜನ ಮೃತಪಟ್ಟಿದ್ದು, 229 ಜನ ಗುಣಮುಖರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!