ಮುಂಬೈನಲ್ಲಿ 3 ಡಾಕ್ಟರ್ಸ್, 23 ನರ್ಸ್ ಗಳಿಗೆ ಕರೋನಾ: ಆಸ್ಪತ್ರೆ ಕ್ಲೋಸ್

679

ಮುಂಬೈ: ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡ್ತಿದ್ದ ವೈದ್ಯರು ಹಾಗೂ ನರ್ಸ್ ಗಳಿಗೆ ಸೋಂಕು ಕಾಣಿಸಿಕೊಂಡು ಪರಿಣಾಮ ಇಡೀ ಆಸ್ಪತ್ರೆ ಬಂದ್ ಮಾಡಲಾಗಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.

ಮುಂಬೈನ ವೋಕ್ಹಾರ್ಡ್ ಅನ್ನೋ ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡ್ತಿದ್ದ ಡಾಕ್ಟರ್ಸ್, ನರ್ಸ್ ಗಳಲ್ಲಿ ಕರೋನಾ ಕಾಣಿಸಿಕೊಂಡಿದೆ. ಡೆಡ್ಲಿ ಕರೋನಾ 3 ವೈದ್ಯರು ಹಾಗೂ 23 ನರ್ಸ್ ಗಳಲ್ಲಿ ಕಾಣಿಸಿಕೊಂಡಿದೆ. ಇದ್ರಿಂದಾಗಿ ಇಡೀ ಆಸ್ಪತ್ರೆ ಕ್ಲೋಸ್ ಮಾಡಲಾಗಿದೆ. ಇಲ್ಲಿ 270ಕ್ಕೂ ಹೆಚ್ಚು ನರ್ಸ್ ಗಳು ಕೆಲಸ ಮಾಡ್ತಿದ್ದು, ಎಲ್ಲರ ತಪಾಸಣೆ ನಡೆಯುತ್ತಿದೆ.

ಇಷ್ಟೆಲ್ಲ ಬೆಳವಣಿಗೆಯಿಂದಾಗಿ ಮಹಾರಾಷ್ಟ್ರ ಸರ್ಕಾರ ಸೋಂಕಿತ ಪ್ರದೇಶಗಳಿಗೆ 4 ವಾರಗಳ ಕಾಲ ನಿರ್ಬಂಧ ಹೇರುವುದು ಅನಿವಾರ್ಯವಾಗಿದೆ ಎಂದಿದ್ದು, ಚೀನಾ ಮಾದರಿ ಅನುಸರಿಸಲಾಗ್ತಿದೆ. 4 ವಾರಗಳಲ್ಲಿ ಸೋಂಕು ಕಾಣಿಸಿಕೊಳ್ಳದೆ ಇದ್ರೆ ಮಾತ್ರ ನಿರ್ಬಂಧ ತೆರುವು ಅನ್ನೋದು ತಿಳಿದು ಬಂದಿದೆ.

ವಾಣಿಜ್ಯನಗರಿ ಮುಂಬೈ ಅಕ್ಷರಶಃ ಮಹಾಮಾರಿ ಕರೋನಾಗೆ ತತ್ತರಿಸಿದೆ. ಇಲ್ಲಿ 690ಕ್ಕೂ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 45 ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ವರದಿಯಾಗಿದೆ. ಸಾರ್ವಜನಿಕರು ಈ ಬಗ್ಗೆ ಗಂಭೀರವಾಗಿ ನಡೆದುಕೊಳ್ಳಬೇಕಿದೆ. ಡಾಕ್ಟರ್ಸ್, ನರ್ಸ್ ಗಳಲ್ಲಿಯೇ ಕರೋನಾ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ರೆ ನಾಳೆ ಜನಸಾಮಾನ್ಯರಿಗೆ ಚಿಕಿತ್ಸೆ ನೀಡುವುದು ಯಾರು? ಸಾವು ನೋವು ತಪ್ಪಿಸುವುದು ಯಾರು? ಇಂಥಾ ಸೂಕ್ಷ್ಮ ವಿಚಾರದಲ್ಲಿ ಉಡಾಫೆ ಮಾಡದೆ ಮನೆಯಲ್ಲಿಯೇ ಇರಿ.




Leave a Reply

Your email address will not be published. Required fields are marked *

error: Content is protected !!