ಹುಬ್ಬಳ್ಳಿಯ ಕ್ಷಮತಾ ಸೇವಾ ಸಂಸ್ಥೆಯ ನಿಸ್ವಾರ್ಥ ಸೇವೆ

348

ವಿಶೇಷ ವರದಿ:

ಕರೋನಾ ಹಾವಳಿಯಿಂದ ಮಾಸ್ಕ್ ಕೊರತೆ ಉಂಟಾಗದಂತೆ ತಡೆಯಲು ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕ್ಷೇತ್ರದ ಬಡ ಮಹಿಳೆಯರಿಗೆ ಸಂಸದರ ಅನುದಾನದಡಿ ವಿತರಿಸಿದ್ದ ಹೊಲಿಗೆ ಯಂತ್ರದ ಸಹಾಯದಿಂದ ಈಗಾಗಲೇ ಸಾವಿರಾರು ಮಾಸ್ಕ್ ಸಿದ್ಧಪಡಿಸಿ, ವಿತರಿಸುವ ಮೂಲ ಮಾದರಿ ಕಾರ್ಯ ಮಾಡುತ್ತಿದ್ದಾರೆ.

ಕೇಂದ್ರ ಸಚಿವ ಜೋಶಿಯವರು ತಮ್ಮ ಕ್ಷೇತ್ರದಲ್ಲಿ 544 ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದಾರೆ. ಅದರಲ್ಲಿ ಸಂಸದರ ಆದರ್ಶ ಗ್ರಾಮವಾದ ಹಾರೋಬೆಳವಡಿ ಮತ್ತು ಕಬ್ಬೇನೂರು ಗ್ರಾಮ ಸೇರಿದಂತೆ ಕ್ಷೇತ್ರದ 200ಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಈ ಮಾಸ್ಕ್ ತಯಾರಿಕೆಯಲ್ಲಿ ನಿಶ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತಲಾ ಒಬ್ಬರು ದಿನಕ್ಕೆ 100 ರಿಂದ 150 ಮಾಸ್ಕ್ಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಕ್ಷಮತಾ ಸೇವಾ ಸಂಸ್ಥೆಯ ಸೇವೆ

ತಮ್ಮದೇ ಪೋಷಕತ್ವದಲ್ಲಿರುವ ಕ್ಷಮತಾ ಸೇವಾ ಸಂಸ್ಥೆಯನ್ನು ಈ ಜನೋಪಕಾರಿ ಕೆಲಸಕ್ಕೆ ಬಳಸಿಕೊಂಡಿರುವ ಸಚಿವ ಜೋಶಿಯವರು, ಮಾಸ್ಕ್ ತಯಾರಿಕೆಗೆ ಅಗತ್ಯವಿರುವ ಬಟ್ಟೆ ಮತ್ತು ದಾರವನ್ನು ಸಂಸ್ಥೆಯಿಂದ ಉಚಿತವಾಗಿ ವಿತರಣೆ ಮಾಡಿಸಿದ್ದಾರೆ. ಸಚಿವರ ಈ ಮಹತ್ವದ ಸೇವಾ ಕಾರ್ಯಕ್ಕೆ ಗ್ರಾಮೀಣ ಪ್ರದೇಶದ ಮಹಿಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

ಲಾಕ್ ಡೌನ್ ನಂತಹ ಕಠಿಣ ಮತ್ತು ಕಷ್ಟದ ಪರಿಸ್ಥಿತಿಯಲ್ಲಿಯೂ ನಮ್ಮ ಕ್ಷೇತ್ರದ ತಾಯಂದಿರು ತಮಗೆ ವಿತರಣೆ ಮಾಡಿದ ಹೊಲಿಗೆ ಯಂತ್ರದಿಂದ ಉಚಿತವಾಗಿ ಮಾಸ್ಕ್ ಸಿದ್ಧಪಡಿಸಿಕೊಡುತ್ತಿರುವುದು ಖುಷಿಯಾಗಿದೆ. ಕರೋನಾ ಮಹಾಮಾರಿಯನ್ನ ಓಡಿಸಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ.

ಪ್ರಹ್ಲಾದ ಜೋಶಿ, ಕೇಂದ್ರ ಸಚಿವರು

ಕ್ಷಮತಾ ಸೇವಾ ಸಂಸ್ಥೆಯೂ 3 ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬರುವ ಸಾವಿರಾರು ಬಡ ಮಹಿಳೆಯರಿಗೆ ಸುವರ್ಣ ಎಜ್ಯುಕೇಶನ್ ಟ್ರಸ್ಟ್ ಉಚಿತ ಹೊಲಿಗೆ ತರಬೇತಿ ನೀಡಿದೆ. ತರಬೇತಿ ಹೊಂದಿದ ಮಹಿಳೆಯರನ್ನು ಬಳಸಿಕೊಂಡು ಈಗಾಗಲೇ ಉತ್ತಮ ಗುಣಮಟ್ಟದ 40 ಸಾವಿರಕ್ಕೂ ಹೆಚ್ಚು ಮಾಸ್ಕ್ಗಳನ್ನು ತಯಾರಿಸಿ, ಉಚಿತ ವಿತರಣೆ ಮಾಡಿದ ಕೀರ್ತಿಗೆ ಪಾತ್ರವಾಗಿದೆ.

ಸಂಸದರ ಅನುದಾನದಡಿ ವಿತರಣೆ ಮಾಡಿದ ಯಂತ್ರಗಳು ಇಂದು ಬಹಳಷ್ಟು ಸಹಕಾರಿಯಾಗಿದ್ದು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಉಚಿತ ಮಾಸ್ಕ್ ತಯಾರಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಟ್ರಸ್ಟ್ ಮಹಿಳೆಯರು ಕರೋನಾ ಹೋರಾಟದಲ್ಲಿ ಭಾಗವಹಿಸಿ “ಕರೋನಾ ವಾರಿಯರ್ಸ್” ಆಗಿರುವುದು ಹೆಮ್ಮೆಯ ಸಂಗತಿ.

ಸವಿತಾ ಅಮರಶೆಟ್ಟಿ, ಸುವರ್ಣಾ ಏಜುಕೇಷನ್ ಟ್ರಸ್ಟ್ ಸಂಸ್ಥಾಪಕಿ

ಹೀಗೆ ಹಲವು ಜನ ಇವತ್ತಿನ ಕರೋನಾ ತುರ್ತು ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಪ್ರತಿಯೊಬ್ಬರನ್ನ ಕಾಡ್ತಿದ್ದು. ಅದರ ನಡುವೆಯೂ ಇತರರ ಸೇವೆಗೆ ನಿಂತಿರುವುದು ನಿಜಕ್ಕೂ ಖುಷಿ ವಿಚಾರ.




Leave a Reply

Your email address will not be published. Required fields are marked *

error: Content is protected !!