ಅಕ್ರಮ ಮದ್ಯ ಸಾಗಾಟ: ಮೂವರ ಬಂಧನ

514

ನಾಗಮಂಗಲ: ಅಕ್ರಮವಾಗಿ ಕಾರಿನಲ್ಲಿ ಮದ್ಯ ಸಾಗಾಟ ಮಾಡ್ತಿದ್ದವರನ್ನ ಬಂಧಿಸಲಾಗಿದೆ. ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದೆ.

ಚೆಕ್ ಪೋಸ್ಟ್ ಬಳಿ ಕೆಎ 53, ಎಂಬಿ 6899 ನಂಬರಿನ ಸ್ವಿಫ್ಟ್ ಕಾರ್ ತಪಾಸಣೆ ವೇಳೆ 5 ಬಾಕ್ಸ್ ಬಿಯರ್ ಬಾಟಲ್ ಪತ್ತೆಯಾಗಿವೆ. ಹೀಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಚನ್ನಪಟ್ಟಣ ತಾಲೂಕಿನ ಮಾಕಳ್ಳ್ಳಿ ಗ್ರಾಮದ ಹರೀಶಗೌಡ, ಸಂದೀಪ ಹಾಗೂ ಸೋಮಶೇಖರ ಎಂಬುವರನ್ನ ಬಂಧಿಸಲಾಗಿದೆ.

ನಾಗಮಂಗಲ ಟೌನ್ ಪೊಲೀಸ್ ಠಾಣೆ ಪಿಎಸ್ಐ ರವಿಕಿರಣ್ ಮತ್ತು ನಿಯೋಜಕ ಪೊಲೀಸ್ ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!