ಒಂದೇ ದಿನಲ್ಲಿ 6,654 ಜನರಲ್ಲಿ ಸೋಂಕು.. ಮಹಾರಾಷ್ಟ್ರ, ಗುಜರಾತನಲ್ಲಿ ರಣಭಯಂಕರ

931

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ದಾಖಲೆಯ ಮಟ್ಟದಲ್ಲಿ ಸೋಂಕು ಪತ್ತೆಯಾಗಿದೆ. ಬರೋಬ್ಬರಿ 6,654 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಇದ್ರಿಂದಾಗಿ ದೇಶದಲ್ಲಿ 1,25,101ಕ್ಕೆ ಸೋಂಕು ಏರಿಕೆಯಾಗಿದೆ. 137 ಮಂದಿ ಸಾವನ್ನಪ್ಪಿದ್ದಾರೆ. ಇದು 3,770ಕ್ಕೆ ಏರಿಕೆಯಾಗಿದೆ. ನಿನ್ನೆ 6,088 ಜನರಲ್ಲಿ ಸೋಂಕು ಪತ್ತೆಯಾಗಿತ್ತು.

ಸತತ ಒಂದು ವಾರದಿಂದ ಸರಾಸರಿ 5 ಸಾವಿರ ಸೋಂಕು ಪತ್ತೆಯಾಗ್ತಿವೆ. 6 ಸಾವಿರ ದಾಖಲಾಗಿದ್ದು ಇದು 2ನೇ ದಿನ. ಭಾರತದಲ್ಲಿ ಲಾಕ್ ಡೌನ್ ಸಡಿಲಿಕೆಯಾದ್ಮೇಲೆ ಸೋಂಕಿನ ಪ್ರಕರಣಗಳು ಹೆಚ್ಚಿಗೆ ಆಗ್ತಿವೆ. ಮಹಾರಾಷ್ಟ್ರದ ಪುಣೆ ಹಾಗೂ ನಾಸಿಕ್ ಎರಡು ನಗರಗಳಲ್ಲಿಯೇ 27 ಸಾವಿರ ಜನರಲ್ಲಿ ಸೋಂಕು ಇದೆ. ದೇಶದ ಟಾಪ್ 5 ರಾಜ್ಯಗಳ ಲಿಸ್ಟ್ ಇಲ್ಲಿದೆ.

ನಂಬರ್ರಾಜ್ಯಸೋಂಕಿತರುಸಾವು
01ಮಹಾರಾಷ್ಟ್ರ44,5831,517
02ಗುಜರಾತ್13,268802
03ರಾಜಸ್ಥಾನ್6,494153
04ಮಧ್ಯಪ್ರದೇಶ6,170272
05ಉತ್ತರ ಪ್ರದೇಶ5,735152

ಇನ್ನು ದೇಶದಲ್ಲಿ ಇದುವರೆಗೂ 51,783 ಜನ ಡಿಸ್ಚಾರ್ಜ್ ಆಗಿದ್ದಾರೆ. 69,597 ಪ್ರಕರಣಗಳು ಚಾಲ್ತಿಯಲ್ಲಿವೆ. 3,720 ಜನರು ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!