ಚಂದನವನದ ‘ಮನ್ಮಥ’ನ ಜನುಮ ದಿನ: ಕಾಶಿ ನೆನೆದ ಸಿನಿ ಸ್ಟಾರ್ಸ್

310

ನಟ ಕಾಶಿನಾಥ ಅಂದ್ರೆ ಸಾಕು ಅವರ ವಿಭಿನ್ನ ನಟನೆ, ಡೈಲಾಗ್ ಶೈಲಿ, ಮಡಿವಂತಿಕೆ ಅನ್ನೋ ಪರದೆ ಹರಿದು ವಾಸ್ತವವನ್ನ ಬೆಳ್ಳಿಪರದೆ ಮೇಲೆ ತೋರಿಸಿದ ರೀತಿ ನೆನಪಾಗುತ್ತೆ. ನಿರ್ದೇಶಕ, ನಟ, ನಿರ್ಮಾಪಕ, ಬರಹಾರ. ಇಂಥಾ ಅದ್ಭುತ ಕಲಾವಿದ ಎಲ್ಲರನ್ನ ಅಗಲಿ ಇಂದಿಗೆ 2 ವರ್ಷವಾಗಿದೆ. ಅವರು ಇಂದು ಇದ್ದಿದ್ರೆ 68 ವರ್ಷ ಆಗ್ತಿತ್ತು.

https://twitter.com/nimmaupendra/status/1258639471114809344?s=20

ಇಂದು ಕಾಶಿನಾಥ ಅವರು ಜನ್ಮ ದಿನ. ಹೀಗಾಗಿ ಸ್ಯಾಂಡಲ್ ವುಡ್ ಮಂದಿ ಅವರನ್ನ ಸ್ಮರಿಸಿಕೊಂಡಿದ್ದಾರೆ. ಇವರ ಶಿಷ್ಯ ಉಪೇಂದ್ರ, ನಿರ್ದೇಶಕ ತರುಣ ಸುಧೀರ, ನಟ ನೆನಪಿರಲಿ ಪ್ರೇಮ ಸೇರಿದಂತೆ ಅನೇಕರು ಅವರನ್ನ ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

https://twitter.com/TharunSudhir/status/1258658944987340801?s=20

ದಿವಂಗತ ಕಾಶಿನಾಥ ಭಾರತೀಯ ಸಿನಿ ದುನಿಯಾದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡವರು. ಅವರ ಚಿತ್ರಗಳು ದಕ್ಷಿಣ ಭಾರತದ ಭಾಷೆಗಳಿಗೆ ರಿಮೇಕ್ ಆಗಿವೆ. ವಯಸ್ಕರ ಚಿತ್ರಗಳಂತೆ ಮೇಲ್ನೋಟಕ್ಕೆ ಕಂಡು ಬಂದರೂ ಸಮಾಜದಲ್ಲಿನ ಅತ್ಯಂತ ಸೂಕ್ಷ್ಮ ವಿಚಾರಗಳ ಎಳೆಯನ್ನ ತೆಗೆದುಕೊಂಡು ಕಥೆ ಹೆಣೆದು ಸಿನ್ಮಾ ಮಾಡಿದ ರೀತಿ ನಿಜಕ್ಕೂ ಅದ್ಭುತ. ಇಂಥಾ ಕಲಾವಿದ ನಮ್ಮ ಜೊತೆ ಇಲ್ಲವಲ್ಲ ಅನ್ನೋದು ನಿಜಕ್ಕೂ ಬೇಸರದ ಸಂಗತಿ.

https://twitter.com/StylishstarPrem/status/1258646691269361665?s=20



Leave a Reply

Your email address will not be published. Required fields are marked *

error: Content is protected !!