ಬ್ರೇಕಿಂಗ್ ನ್ಯೂಸ್
Search

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ?

260

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಡಿರುವ ಟ್ವೀಟ್ ವೊಂದು ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗುತ್ತಿದೆ. ಅವರ ಟ್ವೀಟ್ ಸಹ ಅದೆ ರೀತಿ ಇದೆ.

1992ರಿಂದ ಕ್ರಿಕೆಟ್ ಪಯಣ ಶುರುವಾಗಿದೆ. 2022ಕ್ಕೆ 30 ವರ್ಷ ಪೂರ್ತಿಯಾಗುತ್ತೆ. ಕ್ರಿಕೆಟ್ ನಿಂದ ನಾನು ಸಾಕಷ್ಟು ಪಡೆದಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಎಲ್ಲರಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಇವತ್ತು ನಾನು ಏನಾಗಿದ್ದಕ್ಕೂ ಅದಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇದೀಗ ಹೊಸ ಯೋಚನೆಯಲ್ಲಿದ್ದೇನೆ. ಇದಕ್ಕೆ ಸಾಕಷ್ಟು ಜನರ ಸಹಾಯ ಸಿಗಲಿದೆ. ಇದೆ ರೀತಿ ನೀವು ನನಗೆ ಬೆಂಬಲ ನೀಡುತ್ತೀರಿ ಅನ್ನೋ ನಂಬಿಕೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇತ್ತೀಚೆಗೆ ಕೇಂದ್ರ ಗೃಹ್ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಅದಕ್ಕೂ, ಈ ಟ್ವೀಟ್ ಗೂ ಏನಾದರೂ ಸಂಬಂಧ ಇದೆಯಾ ಅನ್ನೋ ಪ್ರಶ್ನೆ ಮೂಡಿದೆ. ಅಮಿತ್ ಶಾ ಮಗ ಜೈ ಶಾ ಬಿಸಿಸಿಐ ಕಾರ್ಯದರ್ಶಿ ಸಹ ಆಗಿದ್ದಾರೆ. ಇದೆಲಕ್ಕೂ ಆದಷ್ಟು ಬೇಗ ಉತ್ತರ ಸಿಗಬೇಕಿದೆ.




Leave a Reply

Your email address will not be published. Required fields are marked *

error: Content is protected !!