ಮಗ ಹೊಡೆದ ಕ್ಷಣದಲ್ಲೇ ಉಸಿರು ನಿಲ್ಲಿಸಿದ ಹೆತ್ತವಳು..

292

ಪ್ರಜಾಸ್ತ್ರ ಸುದ್ದಿ

ದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನ ನಡುವೆ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೆತ್ತವಳ ಮೇಲೆ ಮಗ ಕೈ ಮಾಡಿದ ಕ್ಷಣದಲ್ಲಿ ತಾಯಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ. ಅವತಾರ ಕೌರ್ ಮೃತ ವೃದ್ಧೆಯಾಗಿದ್ದಾಳೆ.

ಮೃತ ಕೌರ್ ಮಗ ರಣವೀರ್ ಎಂಬಾತ ಬಲವಾಗಿ ಕಪಾಳಕ್ಕೆ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗ ಹೊಡೆದ ತಕ್ಷಣ ತಾಯಿ ಪ್ರಜ್ಞೆ ತಪ್ಪಿಬೀಳುತ್ತಾಳೆ. ಸ್ಥಳದಲ್ಲಿ ಕೌರ್ ಸೊಸೆ ಅತ್ತೆಯನ್ನ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಆದ್ರೆ, ಅದಾಗ್ಲೇ ತಾಯಿ ಸಾವನ್ನಪ್ಪಿರುತ್ತಾರೆ. ಈ ಘಟನೆ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಣವೀರನನ್ನ ಪೊಲೀಸರು ಬಂಧಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!