ಸೂರ್ಯಕುಮಾರ್ ದಾಖಲೆಯ ಶತಕ.. ಭಾರತಕ್ಕೆ ಭರ್ಜರಿ ಗೆಲುವು

171

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವರ್ಲ್ಡ್ ಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ-20 ಸರಣಿ ಆಡುತ್ತಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್ ಲೆಕ್ಕಾಚಾರವನ್ನು ಭಾರತದ ಸ್ಫೋಟಕ ಬ್ಯಾಟ್ಸಮನ್ ಸೂರ್ಯಕುಮಾರ್ ಯಾದವ್ ಉಲ್ಟಾ ಮಾಡಿದರು. 7 ಸಿಕ್ಸ್, 11 ಫೋರ್ ಗಳ ಮೂಲಕ ಕೇವಲ 51 ಬೌಲ್ ಗಳಲ್ಲಿ ಅಜೇಯ 111 ರನ್ ಗಳಿಸುವ ಮೂಲಕ ತಮ್ಮ ಆರ್ಭಟ ಮುಂದುವರೆಸಿದ್ದಾರೆ.

ಇನ್ನು ಇಶಾನ್ ಕಿಶಾನ್ 36 ರನ್ ಹೊರತು ಪಡಿಸಿದರೆ ಉಳಿದವರು ಹೇಳಿಕೊಳ್ಳುವ ಆಟವಾಡಲಿಲ್ಲ. ಹೀಗಾಗಿ ಭಾರತ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಕಿವೀಸ್ ಪರ ಸೌಥಿ 3, ಫಾರ್ಗುಸನ್ 2, ಸೌಧಿ 1 ವಿಕೆಟ್ ಪಡೆದರು.

ಚಾಲೆಂಜಿಂಗ್ ಸ್ಕೋರ್ ಬೆನ್ನು ಹತ್ತಿದ ನ್ಯೂಜಿಲೆಂಡ್ ಟೀಂಗೆ ದೀಪಕ್ ಹೂಡಾ, ಚಹಲ್, ಸಿರಾಜ್ ಶಾಕ್ ನೀಡಿದರು. ಹೂಡಾ 2.5 ಓವರ್ ಗಳಲ್ಲಿ 10 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ನಾಯಕ ಮಿಲಿಯಮ್ಸನ್ 61, ಕಾನ್ವೆ 25, ಫಿಲಪ್ಸ್ 12 ರನ್ ಗಳಿಸಿದ್ದೆ ಗರಿಷ್ಠ ಸ್ಕೋರ್ ಆಗಿದೆ. ಹೀಗಾಗಿ 18.5 ಓವರ್ ಗಳಲ್ಲಿ126 ರನ್ ಗಳಿಗೆ ಆಲೌಟ್ ಆಯಿತು. ಸಿರಾಜ್, ಚಾಹಲ್ ತಲಾ 2 ವಿಕೆಟ್ ಪಡೆದರು. ಭುವನೇಶ್ವಕುಮಾರ್, ವಾಸಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು. ಸೂರ್ಯಕುಮಾರ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.




Leave a Reply

Your email address will not be published. Required fields are marked *

error: Content is protected !!