ಭಾರತೀಯ ವಾಯುಪಡೆಯಲ್ಲಿ ಅಪಾಚೆ

338

ಹೊಸದಿಲ್ಲಿಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್‌ (ಎಎಚ್‌-64(1) ಅನ್ನು ಅಮೆರಿಕದ ಅರಿಝೋನಾದಲ್ಲಿರುವ ಮೆಸಾ ಬೋಯಿಂಗ್ ಉತ್ಪಾದನಾ ಕೇಂದ್ರದಲ್ಲಿ ಭಾರತೀಯ ವಾಯುಪಡೆಗೆ ಶುಕ್ರವಾರ ಹಸ್ತಾಂತರಿಸಲಾಯಿತು. 

ಭಾರತೀಯ ವಾಯಪಡೆಯ ಪ್ರತಿನಿಧಿಯಾಗಿ ಏರ್‌ ಮಾರ್ಷಲ್ ಎ.ಎಸ್ ಬಟೋಲಾ ಅವರು ಮೊದಲ ಅಪಾಚೆ ಹೆಲಿಕಾಪ್ಟರ್‌ ಅನ್ನು ಸ್ವೀಕರಿಸಿದರು. 
2020ರ ಮಾರ್ಚ್‌ ವೇಳೆಗೆ ಭಾರತೀಯ ವಾಯುಪಡೆ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲಿದೆ. ಒಟ್ಟು 13,952 ಕೋಟಿ ರೂ ವೆಚ್ಚದಲ್ಲಿ ಇವುಗಳ ಖರೀದಿಗೆ 2015ರಲ್ಲಿ ಅಮೆರಿಕದ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 

ಈ ಹೆಲಿಕಾಪ್ಟರ್‌ಗಳ ಮೊದಲ ಕಂತು ಜುಲೈನಲ್ಲಿ ಭಾರತಕ್ಕೆ ತಲುಪಲಿದೆ. ಇವುಗಳ ಬಳಕೆಗೆ ಆಯ್ದ ವೈಮಾನಿಕ ಸಿಬ್ಬಂದಿ ಹಾಗೂ ವಾಯುನೆಲೆ ಸಿಬ್ಬಂದಿಗೆ ಅಮೆರಿಕದ ಅಲಬಾಮಾದ ಫೋರ್ಟ್ ರುಕರ್ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗಿದೆ. 
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ದಳದ ಆಧುನೀಕರಣದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಸೇರ್ಪಡೆ ಪ್ರಮುಖ ಹೆಜ್ಜೆಯಾಗಿದೆ.  ‘ಅಪಾಚೆ ಹೆಲಿಕಾಪ್ಟರ್‌ಗಳು ನೆಲದಿಂದ ಅಪಾಯದ ಒದಗಬಹುದಾದ ಶತ್ರುವಿನ ಆಗಸದಲ್ಲೂ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ಸಾಮರ್ಥ್ಯವನ್ನೂ ಅಪಾಚೆಗಳು ಹೊಂದಿವೆ’ ಎಂದು ಭಾರತೀಯ ವಾಯುಪಡೆ ಹೇಳಿದೆ. 
ಸ್ಟಿಂಗರ್‌ ಏರ್‌ ಟು ಏರ್ ಕ್ಷಿಪಣಿಗಳು, ಹೆಲ್‌ಫೈರ್‌ ಲಾಂಗ್‌ಬೋ ಏರ್‌ ಟು ಗ್ರೌಂಡ್‌ ಕ್ಷಿಪಣಿಗಳು, ಗನ್‌ಗಳು ಮತ್ತು ರಾಕೆಟ್‌ಗಳನ್ನು ಅಪಾಚೆ ಹೆಲಿಕಾಪ್ಟರ್‌ಗಳು ಹೊಂದಿರುತ್ತವೆ. 




Leave a Reply

Your email address will not be published. Required fields are marked *

error: Content is protected !!