ಮೋದಿ ಯೋಗ್ಯತೆಗೆ ತಕ್ಕ ಟೈಟಲ್

336

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಯೋಗ್ಯತೆಗೆ ತಕ್ಕಂತಹ ಶೀರ್ಷಿಕೆಯನ್ನು ‘ದಿ ಟೈಮ್‌’ ನಿಯತಕಾಲಿಕೆ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ.  

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ದಿ ಟೈಮ್‌’ ನಿಯತಕಾಲಿಕೆಯ ಮುಖಪುಟವನ್ನು ಟ್ವೀಟ್‌ ಮಾಡಿರುವ ಗುಂಡೂರಾವ್‌, ಮೋದಿ ಅವರ ದಾಖಲೆಯ ಸುಳ್ಳುಗಳು ಎಂಬ ಶೀರ್ಷಿಕೆಯಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ದಿ ಟೈಮ್‌ ಮುಖಪುಟದಲ್ಲಿ ‘ಇಂಡಿಯಾಸ್‌ ಡಿವೈಡರ್‌ ಇನ್‌ ಚೀಫ್‌’ (ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆಯಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ದಾಖಲೆಗಳ ಪಟ್ಟಿ: 

ಟೈಮ್ ಪತ್ರಿಕೆಯ ಮುಖಪುಟ

ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಂದು ಮೋದಿ ಸುಳ್ಳು ಹೇಳಿದರು

ಕೋಪಾರೇಟಿವ್‌ ಫೆಡರಲಿಸಮ್‌ ಎಂಬ ಸುಳ್ಳನ್ನು ಮೋದಿ ಹೇಳಿದರು

ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಸುಳ್ಳು ಹೇಳಿದರು

ಒಂದು ರಾಷ್ಟ್ರ ಒಂದು ತೆರಿಗೆ ಎಂಬ ಸುಳ್ಳು ಹೇಳಿದರು

ಟೀಮ್‌ ಇಂಡಿಯಾ ಎಂಬ ಸುಳ್ಳು ಹೇಳಿದರು

1 ಕೋಟಿ ಉದ್ಯೋಗ ನೀಡುವ ಸುಳ್ಳು ಹೇಳಿದರು

ಮೋದಿ ಅವರ ಯೋಗ್ಯತೆಗೆ ತಕ್ಕಂತೆ ದಿ ಟೈಮ್‌ ಅವರನ್ನು ಭಾರತದ ಮುಖ್ಯ ವಿಭಜಕ ಎಂದು ಕರೆದಿದೆ ಎಂದು ಟ್ವೀಟ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ. 




Leave a Reply

Your email address will not be published. Required fields are marked *

error: Content is protected !!