ಆಸ್ಪತ್ರೆ ಸಿಬ್ಬಂದಿ ಯಡವಟ್ಟಿಗೆ ಕರೋನಾ ಸೋಂಕಿತ ಸಾವು: 77 ಲಕ್ಷ ದಂಡ

323

ಪ್ರಜಾಸ್ತ್ರ ಸುದ್ದಿ

ಅಹ್ಮದಾಬಾದ್: ಕರೋನಾ ಸೋಂಕಿತ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ಮಾಡಿದ ಯಡವಟ್ಟಿಗೆ ಆತನ ಪ್ರಾಣವೇ ಹೋಗಿದೆ. ಗುಜರಾತನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆಗೆ ಬರೋಬ್ಬರಿ 77 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಸೋಂಕಿತನಿಗೆ ವೆಂಟಿಲೇಟರ್ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಇಲ್ಲಿಯ ಶಾಹಿಬಾಗ್ ಪ್ರದೇಶದಲ್ಲಿನ ರಾಜಸ್ತಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ, ಆಸ್ಪತ್ರೆ ಆಡಳಿತ ಮಂಡಳಿ ಆತನನ್ನ ದಾಖಲೆ ಮಾಡಿಕೊಳ್ಳಲು ವಿಳಂಬ ಮಾಡಿದ್ದಕ್ಕೆ ಸಾವನ್ನಪ್ಪಿದ್ದಾನೆ. ಹೀಗಾಗಿ ಆಸ್ಪತ್ರೆ ಮಂಡಳಿಯ 32 ಸದಸ್ಯರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಗುಜರಾತ್ ಹೈಕೋರ್ಟ್ ಸೂಚನೆಯಂತೆ ಎಫ್ಐಆರ್ ದಾಖಲಿಸಲಾಗಿದೆ. ಇದರ ಜೊತೆಗೆ ಆಸ್ಪತ್ರೆ ಆಡಳಿತ ಮಂಡಳಿಗೆ 25 ಲಕ್ಷ ಹಾಗೂ 26 ಸದಸ್ಯರಿಗೆ ತಲಾ 2 ಲಕ್ಷ ರೂಪಾಯಿ ದಂಡ ವಿದಿಸಲಾಗಿದೆ. ಹೀಗಾಗಿ ಒಟ್ಟು 77 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!