ವಿಜಯಪುರ ಎಸ್ಪಿ ಕಚೇರಿ ಸೇರಿ ಪಾಲಿಕೆ ಸೀಲ್ ಡೌನ್

338

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕೋವಿಡ್ 19 ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈಗ ಕರೋನಾ ವಾರಿಯರ್ಸ್ ಗಳಲ್ಲಿಯೂ ಸೋಂಕು ಹೆಚ್ಚಾಗಿದೆ. ಇಲ್ಲಿಯವರೆಗೆ 1001 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ 719 ಜನ ಗುಣಮುಖರಾದ್ರೆ, 382 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಜನ ಸಾವನ್ನಪ್ಪಿದ್ದಾರೆ. ಈಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ, ಹೆಸ್ಕಾಂ ಕಚೇರಿ ಹಾಗೂ ಮಹಾನಗರ ಪಾಲಿಕೆ ಕರೋನಾ ಸೋಂಕಿಗೆ ತುತ್ತಾಗಿದೆ.

ಗಾಂಧಿ ಚೌಕ್ ಪೊಲೀಸ್ ಠಾಣೆಯ 8 ಸಿಬ್ಬಂದಿ, ವಿಜಯಪುರ ಮಹಿಳಾ ಪೊಲೀಸ್ ಠಾಣೆಯ 4 ಸಿಬ್ಬಂದಿ, ಇಂಡಿ ಪಟ್ಟಣ ಪೊಲೀಸ್ ಠಾಣೆಯ 2 ಸಿಬ್ಬಂದಿ, ಡಿಸಿಆರ್ಬಿಯ  2 ಸಿಬ್ಬಂದಿ,  ಎಸ್ಪಿ ಕಚೇರಿಯ 1 ಸಿಬ್ಬಂದಿ,  ಸೈಬರ್ ಕ್ರೈಂ  ವಿಭಾಗದ 2 ಸಿಬ್ಬಂದಿ, ವಿಜಯಪುರ ಗ್ರಾಮೀಣ ಠಾಣೆಯ 1ಸಿಬ್ಬಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ.

ಇನ್ನು ಮಹಾನಗರ ಪಾಲಿಕೆಯ 4 ಸಿಬ್ಬಂದಿ, ಹೆಸ್ಕಾಂ ಕಚೇರಿಯ 2 ಸಿಬ್ಬಂದಿಗೆ ಕರೋನಾ ಪಾಸಿಟಿವ್ ದೃಢವಾಗಿದೆ. ಇದ್ರಿಂದಾಗಿ ನಗರದ ಎಸ್ಪಿ ಕಚೇರಿ, ಪೊಲೀಸ್ ಠಾಣೆ, ಮಹಾನಗರ ಪಾಲಿಕೆಯನ್ನ ಸೀಲ್ ಡೌನ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!