ಏ.11ರ ವರೆಗೆ ಶಾಲಾ ಶಿಕ್ಷಕರಿಗೆ ರಜೆ.. ಖಾಸಗಿ ಶಾಲೆಗಳಿಗೆ ಎಚ್ಚರಿಕೆ

328

ಬೆಂಗಳೂರು: ಕರೋನಾ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 31ರ ತನಕ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದ್ರೆ, ಪ್ರಧಾನಿ ಏಪ್ರಿಲ್ 14ರ ತನಕ ಇಡೀ ದೇಶವೇ ಲಾಕ್ ಡೌನ್ ಮಾಡಿದ್ದಾರೆ. ಹೀಗಾಗಿ ಏಪ್ರಿಲ್ 11ರ ತನಕ ರಾಜ್ಯದ ಶಾಲಾ ಶಿಕ್ಷಕರಿಗೆ ರಜೆ ಘೋಷಿಸಿಲಾಗಿದೆ.

ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಏಪ್ರಿಲ್ 11ರ ವರೆಗೂ ರಜೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ. ಇದರ ಜೊತೆಗೆ 2020-21ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಸಹ ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ ಎಂದಿದ್ದಾರೆ.

ಯಾವುದೇ ಶಾಲೆಗಳು ಪ್ರವೇಶಾತಿ ನಡೆಸುವಂತಿಲ್ಲ. ಖಾಸಗಿ ಶಾಲೆಗಳು ಶೈಕ್ಷಣಿಕ ಶುಲ್ಕವನ್ನ ಕಟ್ಟಿಸಿಕೊಳ್ಳಲು ಒತ್ತಾಯಿಸುವಂತಿಲ್ಲ. ಅವರಿಗೆ ಡೆಡ್ ಲೈನ್ ನೀಡುವಂತಿಲ್ಲ. ಒಂದು ವೇಳೆ ಶಾಲೆಗಳಲ್ಲಿ ಪ್ರವೇಶಾತಿ ನಡೆಸಿರುವುದು, ಶುಲ್ಕು ಕಟ್ಟಿಸಿಕೊಳ್ತಿರುವುದು ಕಂಡು ಬಂದ್ರೆ, ಅಂಥಾ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!