ವಿಜಯಪುರದಲ್ಲಿ ನಿತ್ಯ 1,500 ಜನರ ಪರೀಕ್ಷೆ: ಹೊರ ರಾಜ್ಯದಿಂದ ಬಂದವರೆಷ್ಟು ಗೊತ್ತಾ?

393

ವಿಜಯಪುರ: ದೇಶದ ವಿವಿಧ ಭಾಗಗಳಿಂದ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವವರ ಪೈಕಿ, ನಿತ್ಯ 1,500ಜನರ ಗಂಟಲು ದ್ರವ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಸರ್ಕಾರದ ನಿರ್ದೇಶನದಂತೆ ದ್ರವ ಮಾದರಿಯನ್ನ ಬೆಂಗಳೂರಿಗೆ ಕಳುಹಿಸಲಾಗ್ತಿದೆ. ತೀರಾ ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿದ ಟ್ರ್ಯೂನ್ಯಾಟ್ ಮತ್ತು ಸಿಬಿನ್ಯಾಟ್ ಯಂತ್ರಗಳ ಮೂಲಕ ಪರೀಕ್ಷೆ ನಡೆಸಲಾಗ್ತಿದೆ. ಮಹಾರಾಷ್ಟ್ರದಿಂದ 15 ಸಾವಿರ ಜನ ಜಿಲ್ಲೆಗೆ ಬಂದಿದ್ದಾರೆ. ಗೋವಾದಿಂದ 2,911 ಜನರು ಬಂದಿದ್ದಾರೆ.

ವಿವಿಧ ಜಿಲ್ಲೆಗಳಿಂದ 17,626 ಜನರು ಜಿಲ್ಲೆಗೆ ಬಂದಿದ್ದಾರೆ. ಇದರಲ್ಲಿ 9,987 ಜನರು ಪರವಾನಿಗೆ ಪಡೆದು ಬಂದ್ರೆ 7,639 ಜನರು ಪರವಾನಿಗೆ ಇಲ್ಲದೆ ಬಂದಿದ್ದಾರೆ. ಇವರೆಲ್ಲರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ನಗರದಲ್ಲಿ 2,342 ಹಾಗೂ ಗ್ರಾಮೀಣ ಭಾಗದಲ್ಲಿ 15,285 ಜನರನ್ನ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು ನಾಲ್ವರು ಗುಣಮುಖ:

ಜಿಲ್ಲೆಯಲ್ಲಿ ಇಂದು ನಾಲ್ವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 38, 33 ವರ್ಷದ ಮಹಿಳೆಯರು, 45 ವರ್ಷದ ಪುರುಷ ಹಾಗೂ 11 ವರ್ಷದ ಬಾಲಕಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 61 ಜನ ಸೋಂಕಿತರಲ್ಲಿ 41 ಜನ ಡಿಸ್ಚಾರ್ಜ್ ಆಗಿದ್ರೆ, 4 ಜನ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!