ವಿಜಯಪುರದಲ್ಲಿ ಇನ್ನೂ 120 ವರದಿ ಬಾಕಿ: ಜಿಲ್ಲಾಧಿಕಾರಿ

430

ವಿಜಯಪುರ: ಗುಮ್ಮಟನಗರಿ ಜಿಲ್ಲೆಯಲ್ಲಿ 7 ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು 626 ಜನರ ಮೇಲೆ ಜಿಲ್ಲಾಡಳಿತ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಸಂಜೆ ಮಾಧ್ಯಮಗೋಷ್ಠಿ ನಡೆಸಿದ ಜಿಲ್ಲಾಧಿಕಾರಿಗಳು, ಈಗಾಗಲೇ 28 ದಿನಗಳನ್ನು 278 ಜನ ಮುಗಿಸಿದ್ದಾರೆ. ಸಧ್ಯಕ್ಕೆ 248 ಜನರನ್ನು ಕ್ವಾರೈಂಟನ್ ನಲ್ಲಿ ಇಡಲಾಗಿದೆ. ಅಲ್ದೇ, ಇಲ್ಲಿಯವರೆಗೂ 282 ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿದೆ. ಇದರಲ್ಲಿ 155 ನೆಗೆಟಿವ್ ಬಂದಿವೆ. ಇನ್ನು 120 ರಿಪೋರ್ಟ್ ಬರೋದು ಬಾಕಿ‌ ಇವೆ ಎಂದು ತಿಳಿಸಿದ್ರು.

ಅವರ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿ 300 ಜನ ಬಂದಿದಾರೆ. ಅವರ ಸ್ವ್ಯಾಬ್ ಕಲೆಕ್ಟ್ ಮಾಡ್ತಿದಿವಿ. ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಆದೇಶ ಹೊರಡಿಸಲಾಗಿದೆ. ಯಾವುದೇ ಸಾವು ಆದಲ್ಲಿ, ಎರಡು ದಿನಕ್ಕೊಮ್ಮೆ ಸ್ಮಶಾನ, ರುದ್ರಭೂಮಿಯಲ್ಲಿ ವಿಚಾರಣೆ ಮಾಡಬೇಕು. ಯಾವುದೇ ಡೆತ್ ಆದಲ್ಲಿ ಅದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕ್ವಾರೈಂಟನ್ ನಲ್ಲಿ‌ರುವ ಬಗ್ಗೆ 50 ಸಿಸಿ ಕ್ಯಾಮರಾ ಮೂಲಕ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!