ಬಳ್ಳಾರಿಯಲ್ಲಿ ಇ-ಸ್ಪಂದನೆ ಶುರು

408

ಬಳ್ಳಾರಿ: ಸಾರ್ವಜನಿಕರ ಸಮಸ್ಯೆಗಳನ್ನ ಕೇಳಲು ಹಾಗೂ ತಕ್ಷಣ ಅವರಿಗೆ ಸ್ಪಂದಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇ-ಸ್ಪಂದನೆ ಶುರುವಾಗಿದೆ. ಇ-ಸ್ಪಂದನೆ ಕಂಟ್ರೋಲ್ ರೂಂಗೆ ಫೋನ್ ಮಾಡಿ ದೂರು ದಾಖಲಿಸಬಹುದಾಗಿದೆ. ಇದನ್ನ ಜಿಲ್ಲಾಧಿಕಾರಿ ಎಸ್.ಎಸ್ ನಕುಲ ಉದ್ಘಾಟಿಸಿದ್ದಾರೆ.

ಜಿಲ್ಲೆಯ ಯಾವುದೇ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳಿಗೆ ಸಂಬಂಧಿಸಿದ ದೂರನ್ನ ಈ 8277888866 ವಾಟ್ಸಪ್ ನಂಬರ್ ಗೆ ಸಲ್ಲಿಸಬಹುದು. ಫೋಟೋ, ವಿಡಿಯೋ, ಸಂದೇಶಗಳನ್ನ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳು ಏನಾದ್ರು ಇದ್ರೆ ಸಲ್ಲಿಸಬಹುದು. ಆಗ ಸಂಬಂಧಿಸಿದ ಇಲಾಖೆಗೆ ತಕ್ಷಣ ಕಳಿಸಿ ಶೀಘ್ರವಾಗಿ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಲಾಗುವುದು ಅಂತಾ ಹೇಳಲಾಗಿದೆ. ಅಲ್ದೇ, 1077 ನಂಬರ್ ಫ್ರೀ ಕಾಲ್ ಮಾಡಿ ದೂರು ನೀಡಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!