24 ಗಂಟೆಯಲ್ಲಿ ದೇಶದಲ್ಲಿ 1, 211 ಕೇಸ್

340

ನವದೆಹಲಿ: ಸಾರ್ವಜನಿಕರು ಮೊದಲ ಹಂತದ ಲಾಕ್ ಡೌನ್ ಸರಿಯಾಗಿ ಪಾಲಿಸದೆ, ಪರ ಊರುಗಳಿಂದ ಬಂದವರು ಸೈಲೆಂಟ್ ಆಗಿ ಉಳಿದುಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರೋದು, ತಬ್ಲೀಗ್ ಜಮಾತ್ ಸೇರಿದಂತೆ ಹಲವು ಕಾರಣಗಳಿಂದ ದೇಶದಲ್ಲಿಂದು ಕರೋನಾ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ.

ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 1,211 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. 31 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಬಲಿಯಾದವರ ಸಂಖ್ಯೆ 339ಕ್ಕೆ ಏರಿಕೆಯಾಗಿದೆ.

ಕೋವಿಡ್ 19 ಸೋಂಕು ಸಾವು
ಜಗತ್ತು 19.19 ಲಕ್ಷ 1.19 ಲಕ್ಷ
ಭಾರತ 10, 363 339
ಕರ್ನಾಟಕ 258 09

ದೇಶದಲ್ಲಿ ಇದುವರೆಗೂ 10 ಸಾವಿರದ  363 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದಕ್ಕಾಗಿ 602 ಆಸ್ಪತ್ರೆಗಳು ಕಾರ್ಯನಿರ್ವಹಿಸ್ತಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆ 50 ಜನ ಸಾವನ್ನಪ್ಪಿದ್ರು. ಇಂದು 31 ಜನ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ನೋಡಿದ್ರೆ ಭಾರತಕ್ಕೆ ಮುಂದಿನ ದಿನಗಳಲ್ಲಿ ಎಷ್ಟೊಂದು ಅಪಾಯ ಕಾಯ್ದಿದೆ ಎನಿಸುತ್ತಿದೆ.




Leave a Reply

Your email address will not be published. Required fields are marked *

error: Content is protected !!