ಮತ್ತೆ ಸುದ್ದಿಯಲ್ಲಿದ್ದಾಳೆ ‘ದಮಯಂತಿ’

325

ನಟಿ ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನ್ಮಾ ಇದೀಗ ಮತ್ತೆ ಸೌಂಡ್ ಮಾಡ್ತಿದೆ. ಕಾರಣ, ಈ ಸಿನ್ಮಾ ಮೊದ್ಲು ನಾಲ್ಕು ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿತ್ತು. ಇದೀಗ ಅದು ಐದು ಭಾಷೆಗಳಲ್ಲಿ ಬರ್ತಿದೆ.

ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ

ಈಗಾಗ್ಲೇ ಟ್ರೇಲರ್ ರಿಲೀಸ್ ಮಾಡಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಿಯಾಳಂನಲ್ಲಿ ಸಿನಿಮಾ ರಿಲೀಸ್ ಗೆ ಪ್ಲಾನ್ ಆಗಿತ್ತು. ಈಗ ಇದನ್ನ ಹಿಂದಿಯಲ್ಲಿಯೂ ಬಿಡುಗಡೆಗೆ ನಟಿ ಕಂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ರೆಡಿಯಾಗಿದ್ದಾರೆ. ಮೊದ್ಲು ನಾಲ್ಕು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ. ಒಂದು ವಾರದ ಬಳಿಕ ಹಿಂದಿಯಲ್ಲಿ ರಿಲೀಸ್ ಆಗಲಿದೆ.

ಮಲಿಯಾಳಂ ಪೋಸ್ಟರ್ ರಿಲೀಸ್ ಮಾಡಿದ ಸೂಪರ್ ಸ್ಟಾರ್ ಮುಮ್ಮಟ್ಟಿ

ನಟಿ ರಾಧಿಕಾ ಕುಮಾರಸ್ವಾಮಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಕ್ಕಿ, ಸ್ವೀಟಿ ನನ್ನ ಜೋಡಿ ಸಿನ್ಮಾ ನಿರ್ಮಾಣದ ಬಳಿಕ ದಮಯಂತಿ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ನವೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!