ನಿರ್ಮಾಪಕರ ಟ್ವೀಟ್.. ಡಿ ಬಾಸ್ ಫ್ಯಾನ್ಸ್ ನಡುವೆ ದೊಡ್ಡ ಚರ್ಚೆ…

335

ನಟ ಚಾಲೆಂಜಿಂಗ್ ಸ್ಟಾರ್ ದರ್ಶನಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಡಿ ಬಾಸ್ ಅಂದ್ರೆ ಸಾಕು ಹುಚ್ಚೆದ್ದು ಕುಣಿಯುತ್ತಾರೆ. ಹೀಗಾಗಿ ಅವರನ್ನ ಹಾಕಿಕೊಂಡು ಸಿನ್ಮಾ ಮಾಡಬೇಕು ಅನ್ನೋದು ಅನೇಕ ನಿರ್ಮಾಪಕರ ಕನಸು. ಅದರಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಒಬ್ಬರಾಗಿದ್ದಾರೆ.

ಸ್ಯಾಂಡಲ್ ವುಡ್ ಅಂಗಳದಲ್ಲಿ ಯಶಸ್ವಿ ನಿರ್ಮಾಪಕರೆಂದು ಪುಷ್ಕರ್ ಮಲ್ಲಿಕಾರ್ಜುನ್ಯ ಗುರುತಿಸಿಕೊಂಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ ಅವರ ಕಾಲ್ ಶೀಟ್ ಕೇಳಿದ್ದು, ಅಲ್ದೇ ಬಿಗ್ ಬಜೆಟ್ ಸಿನ್ಮಾ ಮಾಡೋಣವೆಂದು ಕೇಳಿಕೊಂಡಿದ್ದಾರೆ.

ಈ ಟ್ವೀಟ್ ಓದಿದ ಡಿ ಬಾಸ್ ಅಭಿಮಾನಿಗಳು ಪುಷ್ಕರ್ ಅವರಿಗೆ ಕಾಲ್ ಶೀಟ್ ಕೊಡಿ. ಪ್ಯಾನ್ ಇಂಡಿಯಾ ಸಿನ್ಮಾ ಮಾಡಿ ಅಂದಿದ್ದಾರೆ. ಇನ್ನು ಕೆಲವರು ಈ ರೀತಿ ಆಸೆ ಹುಟ್ಟಿಸಿ ಕೈ ಬಿಡ್ಬೇಡಿ. ಒಳ್ಳೆ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಹೋಗಿ ಖಂಡಿತ ಒಪ್ಪಿಕೊಳ್ತಾರೆ ಅಂತಾ ರೀ ಟ್ವೀಟ್ ಮಾಡ್ತಿದ್ದಾರೆ. ಭಾನುವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಭರ್ಜರಿಯಾಗಿ ಚರ್ಚೆಯಾಗ್ತಿದೆ.




Leave a Reply

Your email address will not be published. Required fields are marked *

error: Content is protected !!