ಹೊರಟ್ಟಿ ಹೊಸ ಬಾಂಬ್

367

ಹುಬ್ಬಳ್ಳಿ: ಜೆಡಿಎಸ್ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ
ಹೊಸ ಬಾಂಬ್ ಸಿಡಿಸಿದ್ದಾರೆ. ಸರ್ಕಾರ ವಿಸರ್ಜನೆ ಮಾಡಿ, ಚುನಾವಣೆಗೆ ಹೋಗೋದು ಬೆಸ್ಟ್ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಜೊತೆ ಎಲ್ಲ ರೀತಿಯಿಂದ ಹೊಂದಾಣಿಕೆ ಮಾಡಿಕೊಂಡು ಹೋಗೋದು ಕಷ್ಟ. ಕಾಂಗ್ರೆಸ್ ನಾಯಕರು ಬರೀ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಅಂತಾ ಹೊರಟ್ಟಿ ಹೇಳಿದ್ದಾರೆ.

ಮೂರು ಬಾರಿಯೂ ಮೈತ್ರಿ ಸರ್ಕಾರ ನಡೆಸಿದ್ರೂ, ಪೂರ್ತಿ ಪ್ರಮಾಣದಲ್ಲಿ ಆಡಳಿತ ನಡೆಸಲು ಆಗಿಲ್ಲ. ಸಮನ್ವಯ ಸಮಿತಿಯಲ್ಲಿಯೂ ಈ ಬಗ್ಗೆ ಯಾವುದೇ ಚರ್ಚೆ ಮಾಡುತ್ತಿಲ್ಲ. ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಮೈತ್ರಿ ಸರ್ಕಾರದಿಂದ ಹೊರ ಬರಬೇಕು ಅಂತಾ ಹೇಳಿದ್ದಾರೆ. ಇದರಿಂದಾಗಿ ಇದೀಗ ರಾಜ್ಯದಲ್ಲಿ ಮತ್ತಷ್ಟು ಗೊಂದಲ ಮೂಡಿದ್ದು, ತಮಿಳುನಾಡಿಗೆ ಹೊರಿಟ್ಟದ್ದ ಸಿಎಂ ಕುಮಾರಸ್ವಾಮಿ ಮೈಸೂರಿಗೆ ವಾಪಸ್ ಆಗಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ, ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಅಂತಾ ಹೇಳಲಾಗುತ್ತಿದೆ. ಇಷ್ಟು ದಿನ ಕೈ ನಾಯಕರು ಹೇಳಿಕೆ ನೀಡುತ್ತಿದ್ದರೆ, ಇದೀಗ ಜೆಡಿಎಸ್ ನಾಯಕರ ಸರದಿ ಶುರುವಾಗಿದೆ. ಇದಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಅವರ ಲೀಡರ್ ಗಳಾದ ಕುಮಾರಸ್ವಾಮಿ ಹಾಗೂ ದೇವೇಗೌಡರ ಜೊತೆ ಚರ್ಚಿಸಲಿ ಅಂತಾ ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!