ಜಮೈಕಾಗೆ ರಾಷ್ಟ್ರಪತಿ.. ನೇಪಾಳಕ್ಕೆ ಪ್ರಧಾನಿ

448

ಪ್ರಜಾಸ್ತ್ರ ಸುದ್ದಿ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಲ್ಕು ದಿನಗಳ ಪ್ರವಾಸದ ಹಿನ್ನೆಲೆ ಜಮೈಕಾಗೆ ತೆರಳಿದ್ದಾರೆ. ಅವರನ್ನು ಕಿಂಗ್ಸ್ ಟನ್ ನಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಕೋವಿಂದ್ ಅವರಿಗೆ ಗಾರ್ಡ್ ಆಫ್ ಆನರ್ ಸಲ್ಯೂಟ್ ವಂದನೆ ಸಲ್ಲಿಸಲಾಯಿತು.

ಜಮೈಕಾಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗದ್ದಾರೆ. ಇವರೊಂದಿಗೆ ಅವರ ಪತ್ನಿ ಸವಿತಾ, ಮಗಳು ಸ್ವಾತಿ, ಕೇಂದ್ರ ಸಚಿವ ಪಂಕಪ್ ಚೌಧರಿ, ಸಂಸದೆ ರಮಾದೇವಿ ಹಾಗೂ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಅವರೊಂದಿಗಿದ್ದಾರೆ.

ಇನ್ನು ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇಪಾಳದ ಲುಂಬಿನಿಗೆ ತೆರಳಿದ್ದಾರೆ. ಬುದ್ಧನ ಜನ್ಮ ಸ್ಥಳದಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ರೈಲು ಹಾಗೂ ರಸ್ತೆಯ ಮೂಲಕ ಭಾರತ ಹಾಗೂ ನೇಪಾಳ ನಡುವೆ ಸಂಪರ್ಕ ಕಲ್ಪಿಸುವ ಯೋಜನೆಗಳ ಕುರಿತು ಘೋಷಿಸಬಹುದು.

ಇನ್ನು ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸುವ ಸಂಬಂಧ ಹಲವು ಯೋಜನೆಗಳ ಕುರಿತು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಜೊತೆಗೆ ಚರ್ಚಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!