48 ಸಾವಿರ ಸರ್ಕಾರಿ ಶಾಲೆಗಳು ಅಲಂಕಾರ

443

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ. ಬೇಸಿಗೆ ರಜೆ ಮುಗಿದು ಶಾಲೆಗಳು ಪ್ರಾರಂಭವಾಗಿವೆ. ಹೀಗಾಗಿ ಮಕ್ಕಳನ್ನು ಸ್ವಾಗತಿಸಲು ಶಾಲೆಗಳಿಗೆ ಅಲಂಕಾರ ಮಾಡಲಾಗಿದೆ.

ರಾಜ್ಯದ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿಗೆ ಅಲಂಕಾರ ಮಾಡಲಾಗಿದೆ. ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ಶಾಲೆಗಳನ್ನು ಅಲಂಕರಿಸಲಾಗಿದೆ. ಇದಕ್ಕೆ ಶಿಕ್ಷಕರು, ಶಾಲಾ ಅಭಿವೃದ್ಧಿ ಮಂಡಳಿ, ಎಸ್ ಡಿಎಂಸಿ ಸದಸ್ಯರು ಸೇರಿದಂತೆ ಅನೇಕರು ಕೈ ಜೋಡಿ ಅಲಂಕರಿಸಲಾಗಿದೆ.

ರಾಜ್ಯದಲ್ಲಿ 48,066 ಶಾಲೆಗಳಲ್ಲಿ 10 ಸಾವಿರ ಶಾಲೆಗಳನ್ನು ದುರಸ್ತಿ ಮಾಡಬೇಕಿದೆ. ಇಂತಹ ಶಾಲೆಗಳನ್ನು ಪರಿಶೀಲಿಸಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆಯಂತೆ. 22,065 ಖಾಸಗಿ ಶಾಲೆಗಳು, 6,722 ಅನುದಾನಿತ ಶಾಲೆಗಳಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳು ಜೂನ್ 1ರಿಂದ ಪ್ರಾರಂಭಿಸಲು ನಿರ್ಧರಿಸಿವೆ.


TAG


Leave a Reply

Your email address will not be published. Required fields are marked *

error: Content is protected !!