ದೇಸೀ ಆಟಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ

237

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತುಂಬಾ ವೇಗವಾಗಿ ಬೆಳೆಯುತ್ತಿರುವ ವಿಜ್ಞಾನ ತಂತ್ರಜ್ಞಾನದ ಕಾಲಘಟ್ಟದ್ಲಿ ಎಲ್ಲೆಡೆ ಇಂದು ದೇಸೀ ಆಟಗಳು ಕಣ್ಮರೆಯಾಗುತ್ತಿವೆ. ವಿಜ್ಞಾನದಲ್ಲಿಯೂ ದೇಸೀ ಆಟಗಳಿವೆ. ಈ ನೆಲದ ಆಟಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಇವುಗಳನ್ನು ಉಳಿಸುವ ಕೆಲಸವಾಗಬೇಕು ಎಂದು ಹೆಚ್.ಜಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.

ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದೇಸೀ ಆಟಗಳ ಪರಿಚಯ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ದಾನಪ್ಪ ಮಠಪತಿ ಮಾತನಾಡಿ, ದೇಸೀ ಆಟಗಳು ದೈಹಿಕ, ಮಾನಿಕ ಶಕ್ತಿಯ ಜೊತೆಗೆ ಮನರಂಜನೆ ನೀಡುತ್ತವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಜೆ.ಸಿ ನಂದಿಕೋಲ, ಗ್ರಾಮೀಣ ಭಾಗದಲ್ಲಿ ದೇಸೀ ಆಟಗಳು ಸಿಗುತ್ತವೆ. ಆದರೆ, ಇಂದು ಅಲ್ಲಿಯೂ ಕಣ್ಮರೆಯಾಗಿ ಹೋಗುವ ಸ್ಥಿತಿಯಲ್ಲಿದೆ. ಹೀಗಾಗಿ ಸರ್ಕಾರ ದೇಸೀ ಕ್ರೀಡಾಕೂಟಗಳ ಕಡೆ ಗಮನ ಹರಿಸಬೇಕು ಎಂದರು.

ಪ್ರಶಿಕ್ಷಣಾರ್ಥಿ ಅಶ್ವಿನಿ ಕೋರೆ ನಿರೂಪಿಸಿದರು. ಲಕ್ಷ್ಮೀ ಚವ್ಹಾಣ ಪ್ರಾರ್ಥಿಸಿದರು. ಮಂಜುನಾಥ ಘರ್ ಸ್ವಾಗತಿಸಿದರು. ಈ ವೇಳೆ ಉಪನ್ಯಾಸಕರಾದ ಎಸ್.ವಿ ಚವ್ಹಾಣ, ಎನ್.ಬಿ ಪೂಜಾರಿ, ಪಿ.ಸಿ ಕುಲಕರ್ಣಿ, ರೇವಣಸಿದ್ಧ ಹಾಲಕೇರಿ, ಚನ್ನು ಕತ್ತಿ, ಕುಮಾರ ಕತ್ತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!