ಕಾಲ ಯಾವಾಗ್ಲೂ ನಮ್ಮದಾಗಿರೋದಿಲ್ಲ.. ಅಂದು ಧರಂಸಿಂಗ್.. ಇಂದು ಹೆಚ್ಡಿಕೆ..

546

ಈ ಹೊತ್ತಿನ ರಾಜ್ಯ ರಾಜಕೀಯ ಸ್ಥಿತಿಯನ್ನ ನೋಡಿದ್ರೆ, 2006ರ ಕಾಲಘಟಕ್ಕೆ ಒಮ್ಮೆ ಹೋಗಿರಬೇಕಾಗುತ್ತೆ. ಆಗ ಸಿಎಂ ಆಗಿದ್ದ ಧರಂಸಿಂಗ್ ಅವರ ಪರಿಸ್ಥಿತಿ ಹೇಗಿತ್ತೋ.. ಇದೀಗ ಸಿಎಂ ಕುಮಾರಸ್ವಾಮಿ ಅವರ ಪರಿಸ್ಥಿತಿ ಸಹ ಹಾಗೇ ಇದೆ. ಹೀಗಾಗಿ ಕಾಲ ಯಾವಾಗ್ಲೂ ಒಂದೇ ರೀತಿ ಇರೋದಿಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಎನ್ನಬಹುದು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಬೆಂಬಲಿಂದಾಗಿ ಧರಂಸಿಂಗ್ ಅಂದು ಸಿಎಂ ಆಗಿದ್ರು. ಆದ್ರೆ, ಅವರು ಸಿಎಂ ಆಗಿ ಅಧಿಕಾರದಲ್ಲಿ ಇರುವಷ್ಟು ದಿನ ನೆಮ್ಮದಿಯಾಗಿ ಆಡಳಿತ ನಡೆಸಿಲ್ಲ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಯಾಕಂದ್ರೆ, ಅಂದಿನ ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ನ ಹಸ್ತಕ್ಷೇಪ ಅಷ್ಟರ ಮಟ್ಟಿಗೆಯಿತ್ತು. ಹೀಗಾಗಿ ಧರಂಸಿಂಗ್ ಅವರು ಸಾಕಷ್ಟು ಯಾತನೆ ಅನುಭವಿಸದರು ಅನ್ನೋದು ಬಲ್ಲವರ ಮಾತುಗಳು.

ಜೆಡಿಎಸ್ ನ ಕೆಟ್ಟ ನಡೆಯಿಂದಾಗಿ ಕೊನೆಗೂ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಐದು ವರ್ಷ ಪೂರ್ತಿ ಮಾಡ್ಲಿಲ್ಲ. ಹೀಗಾಗಿ ಧರಂಸಿಂಗ್ ಗೆ ನೀಡಿದ್ದ ಬೆಂಬಲ ವಾಪಸ್ ಪಡೆದು ಬಿಜೆಪಿ ಜೊತೆ ಕುಮಾರಸ್ವಾಮಿ ಕೈ ಜೋಡಿಸಿದ್ರು. ಅವರ ಜೊತೆಯೂ ಸಹ ಪೂರ್ತಿಯಾಗಿ ಇರ್ಲಿಲ್ಲ. ಹೀಗಾಗಿ ಬಿ.ಎಸ್ ಯಡಿಯೂರಪ್ಪ ಸಹ, ಧರಂಸಿಂಗ್ ಅವರಿಗೆ ದ್ರೋಹ ಮಾಡಿ ನಮ್ಮ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ರಿ. ಅದೇ ನೋವಿನಲ್ಲಿ ಅವರು ಸಾವನ್ನಪ್ಪಿದ್ರು ಅಂತಾ ಆರೋಪ ಮಾಡಿದ್ರು.

ಈಗ ಧರಂಸಿಂಗ್ ಸ್ಥಾನದಲ್ಲಿ ಸಿಎಂ ಕುಮಾರಸ್ವಾಮಿ ಇದ್ದಾರೆ. ಅಂದು ಧರಂಸಿಂಗ್ ಆಡಳಿತ ನಡೆಸಿರೋದ್ಕಿಂತ ಜೆಡಿಎಸ್ ನವರ ಕೋರಿಕೆ, ಬೇಡಿಕೆ ಈಡೇರುಸುವಲ್ಲಿಯೇ ಹೈರಾಣಾಗಿದ್ರು. ಈಗ ಸಿಎಂ ಕುಮಾರಸ್ವಾಮಿ ಅದೇ ಪರಿಸ್ಥಿತಿಯನ್ನ ಎದುರಿಸ್ತಿದ್ದಾರೆ. ಆಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯನವರನ್ನ ಜೆಡಿಎಸ್ ತೆಕ್ಕೆಯಿಂದ ಬಿಡಿಸಿಕೊಂಡು ಬರಲು ಕೈ ಪ್ಲಾನ್ ಮಾಡಿತು. ಹೀಗಾಗಿ ಮೈತ್ರಿ ಸರ್ಕಾರ ಕೆಡವಲು ಕುಮಾರಸ್ವಾಮಿಯೇ ಸ್ವತಃ ಮುಂದಾಗಿದ್ರು.

ಜೆಡಿಎಸ್ ಬೆಂಬಲ ನೀಡಿದೆ ಅನ್ನೋ ಕೃತಜ್ಞತೆಯನ್ನ ಧರಂಸಿಂಗ್ ಇಟ್ಟುಕೊಂಡಿದ್ರು. ಹೀಗಾಗಿ ಜೆಡಿಎಸ್ ಆಡಬಾರದ ಆಟವಾಡಿತು. ಇಂದು ಬಿಜೆಪಿಯನ್ನ ದೂರವಿಡಲು ಕಾಂಗ್ರೆಸ್ ನಮ್ಮ ಜೊತೆ ಕೈ ಜೋಡಿಸಿದೆ. ಹೀಗಾಗಿ ನಾವ್ಯಾಕೆ ಅವರ ಮಾತಿಗೆ ಸೈ ಎನ್ನಬೇಕು ಅನ್ನೋ ರೀತಿಯಲ್ಲಿ ಜೆಡಿಎಸ್ ನಡೆದುಕೊಳ್ತಿದೆ. ಇದರ ಫಲವನ್ನ ಸಿಎಂ ಕುಮಾರಸ್ವಾಮಿ ಅನುಭವಿಸ್ತಿದ್ದಾರೆ. ಇದ್ರಿಂದಾಗಿ ಹೋದಲ್ಲಿ ಬಂದಲ್ಲಿ ನಾನು ನೆಮ್ಮದಿಯಿಂದ ಇಲ್ಲ. ಸಾಂದರ್ಭಿಕ ಶಿಶು ಅಂತೆಲ್ಲ ಹೇಳ್ತಿದ್ದಾರೆ. ಹೀಗಾಗಿ 2006 ಧರಂಸಿಂಗ್ ಸರ್ಕಾರ ಹಾಗೂ ಇಂದಿನ ಕುಮಾರಸ್ವಾಮಿ ಸರ್ಕಾರದಲ್ಲಿ ಸಾಮ್ಯತೆಯಿದೆ.

ಅಂದು ಧರಂಸಿಂಗ್ ಅವರಿಗೆ ಸ್ವಪಕ್ಷೀಯರು ಹಾಗೂ ಜೆಡಿಎಸ್ ನವರು ನೀಡಿದ ಕಿರುಕುಳವನ್ನ, ಇಂದು ಕುಮಾರಸ್ವಾಮಿಗೆ ಸ್ವಪಕ್ಷೀಯ, ಮೈತ್ರಿ ಪಕ್ಷ ಹಾಗೂ ವಿರೋಧ ಪಕ್ಷ ನೀಡ್ತಿದೆ. ಇದ್ರಿಂದಾಗಿ ಕುಮಾರಸ್ವಾಮಿ ಕಳೆದ 13 ತಿಂಗಳಿನಿಂದ ಸರಿಯಾಗಿ ಸರ್ಕಾರ ನಡೆಸಲು ಆಗ್ತಿಲ್ಲ. ಒಂದಲ್ಲ ಒಂದು ಸಮಸ್ಯೆಯನ್ನ ಎದುರಿಸುತ್ತಲೇ ಇದ್ದಾರೆ. ಅಂದು ಕಾಂಗ್ರೆಸ್ ತೊರೆದು ಬಿಜೆಪಿ ಕೈ ಹಿಡಿದ ಕುಮಾರಸ್ವಾಮಿ ನಡೆಯಿಂದ ದೇವೇಗೌಡರು ರಾಜೀನಾಮೆ ನೀಡಿದ್ರು. ಇಂದು ಸ್ವಪಕ್ಷೀಯ ಹಾಗೂ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡ್ತಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ಮಾಡ್ತಿದೆ ಅನ್ನೋ ಜೆಡಿಎಸ್, ಅಂದು ಧರಂಸಿಂಗ್ ಸರ್ಕಾರವನ್ನ ಬೀಳಿಸಿ, ಬಿಜೆಪಿಯೊಂದಿಗೆ ದೋಸ್ತಿ ಬೆಳೆಸಿತು. ಇಂದು ಬಿಜೆಪಿಗೆ ಅಧಿಕಾರದ ದಾಹ ಅನ್ನೋ ಜೆಡಿಎಸ್, ಅಂದು ಧರಂಸಿಂಗ್ ಗೆ ಮಾಡಿದ ದ್ರೋಹ ಏನನ್ನ ಹೇಳುತ್ತೆ. ಅಂದು ಧರಂಸಿಂಗ್ ಎದುರಿಸಿರುವ ಎಲ್ಲ ಪರಿಸ್ಥಿತಿಗಳನ್ನ ಇಂದು ಕುಮಾರಸ್ವಾಮಿ ಎದುರಿಸ್ತಿದ್ದಾರೆ. ಕಾಲ ಎಲ್ಲರ ಕಾಲನ್ನ ಎಳೆಯುತ್ತೆ.




Leave a Reply

Your email address will not be published. Required fields are marked *

error: Content is protected !!