ದಿಶಾ ಪ್ರಕರಣ: ನಕಲಿ ಎನ್ ಕೌಂಟರ್ ಎಂದ ಸಮಿತಿ

275

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ 2019ರಲ್ಲಿ ಹೈದ್ರಾಬಾದ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಡೆದ ಎನ್ ಕೌಂಟರ್ ನಕಲಿ ಎಂದು ಸುಪ್ರೀಂ ಕೋರ್ಟ್ ಸಮಿತಿ ಹೇಳಿದೆ. ಈ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿ ಸಿರ್ಪುರ್ಕರ್ ಸಮಿತಿ ಹೇಳಿದೆ.

ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದಿರುವ ಮೂವರು ಸದಸ್ಯರ ಸಮಿತಿ, ಆರೋಪಿ ಪೊಲೀಸರನ್ನು ಕೊಲೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಸೂಚಿಸಿದೆ.

2019 ನವೆಂಬರ್ ನಲ್ಲಿ ಹೈದ್ರಾಬಾದ್ ನ ಶಂಶಾಬಾದ್ ನಲ್ಲಿ 26 ವರ್ಷದ ಪಶುವೈದ್ಯೆಯಾಗಿದ್ದ ಯುವತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ನಂತರ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಮುಂದೆ ಡಿಸೆಂಬರ್ 6, 2019ರಲ್ಲಿ ಬೆಂಗಳೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ ಸೇತುವೆ ಕೆಳಗೆ ಎನ್ ಕೌಂಟರ್ ಮಾಡಲಾಯಿತು. ಬಂದೂಕು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಎನ್ ಕೌಂಟರ್ ಮಾಡಲಾಗಿದೆ ತಿಳಿಸಲಾಗಿತ್ತು. ಆದರೆ, ಇದು ನಕಲಿ ಎನ್ ಕೌಂಟರ್ ಆಗಿದ್ದು, ಕಾನೂನು ಬಾಹಿರ ಕೊಲೆ ಆರೋಪಿಗಳನ್ನು ತನಿಖೆ ನಡೆಸಲು ಆಯೋಗ ರಚಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!