ಸಂಸದ ಸ್ಥಾನದಿಂದ ಪ್ರತಾಪ್ ಸಿಂಹ ವಜಾಗೊಳಿಸಿ: ಕಾಂಗ್ರೆಸ್

149

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರಲ್ಲಿ ಪಾಸ್ ಪಡೆದು ಲೋಕಸಭೆಗೆ ನುಗ್ಗಿದ ಇಬ್ಬರು ಅಪರಿಚಿತರು ಆತಂಕ ಸೃಷ್ಟಿಸಿದ ಘಟನೆ ಬುಧವಾರ ನಡೆದಿದೆ. ಇದು ದೇಶ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದು, ಸಂಸದರಿಗೆ ರಕ್ಷಣೆ ಇಲ್ಲದಂತಾಗಿದೆ. ಮೇಲ್ನೋಟಕ್ಕೆ ಸಂಸದ ಪ್ರತಾಪ್ ಸಿಂಹ ಹೆಸರು ಕೇಳಿ ಬಂದಿದ್ದು, ಸಂಸದ ಸ್ಥಾನದಿಂದ ವಜಾಗೊಳಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಬರೆದಿರುವ ಕಾಂಗ್ರೆಸ್, ಸಂಸತ್ ಭವನದೊಳಗೆ ಟಿಯರ್ ಗ್ಯಾಸ್ ಸ್ಫೋಟಿಸಿದ ಆಗಂತುಕರಿಗೆ ಅಕಸ್ಮಾತ್ ಕಾಂಗ್ರೆಸ್ ಸಂಸದರಿಂದ ಪಾಸ್ ಸಿಕ್ಕಿದಿದ್ದರೆ ಬಿಜೆಪಿಗರು ಹೇಗೆ ವರ್ತಿಸುತ್ತಿದ್ದರು. ಈಗೇಕೆ ಬಿಜೆಪಿ ನಾಯಕರು ಏನೂ ಆಗಿಯೇ ಇಲ್ಲ ಎಂಬಂತೆ ಮುಗುಮ್ಮಾಗಿದ್ದಾರೆ? ಭದ್ರತಾ ಲೋಪದ ಬಗ್ಗೆ ಬಿಜೆಪಿಗರು ತುಟಿ ಬಿಚ್ಚದಿರುವುದೇಕೆ? ದೇಶದ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಲ್ಲವೇ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.

ಸಂಸತ್ತಿಗೆ ನುಗ್ಗಿದ ಆಗಂತುಕರು ಪಾಸ್ ಪಡೆದಿದ್ದು ಪ್ರತಾಪ್ ಸಿಂಹರಿಂದ. ಈ ದಾಳಿಕೋರರು ಪ್ರತಾಪ್ ಸಿಂಹ ಅವರ ಆಪ್ತ ವಲಯದವರೇ? ಪ್ರತಾಪ್ ಸಿಂಹರಿಂದಲೂ ಈ ದಾಳಿಯ ಷಡ್ಯಂತ್ರ ನಡೆದಿತ್ತೇ? ಈ ಎಲ್ಲ ಸಂಗತಿಗಳ ತನಿಖೆ ನಡೆಸಲು ಇದುವರೆಗೂ ಪ್ರತಾಪ್ ಸಿಂಹರನ್ನು ವಶಕ್ಕೆ ಪಡೆದಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.




Leave a Reply

Your email address will not be published. Required fields are marked *

error: Content is protected !!