ಎಲ್ಲೆಡೆ ಡಾ.ವಿಷ್ಣು ಹುಟ್ಟು ಹಬ್ಬದ ಸಂಭ್ರಮ

226

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಸಾಹಸ ಸಿಂಹ, ಯಜಮಾನ ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಸೇರಿದಂತೆ ಸಿನಿ ರಂಗದವರು, ರಾಜಕೀಯ ಕ್ಷೇತ್ರದವರು ಸೇರಿದಂತೆ ಪ್ರತಿಯೊಬ್ಬರು ಆಚರಣೆ ಮಾಡುತ್ತಿದ್ದಾರೆ.

ವಿಷ್ಣು ನಮ್ಮೊಂದಿಗಿಲ್ಲ ಅನ್ನೋ ಕಾರಣಕ್ಕೆ ಅವರ ಅಭಿಮಾನಿಗಳು ಸೇರಿದಂತೆ ಯಾರೂ ಅವರನ್ನು ಮರೆತಿಲ್ಲ. ಮರೆಯೋದೂ ಇಲ್ಲ. ಹೀಗಾಗಿ ಇಂದು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಇರುವ ಅವರ ಫ್ಯಾನ್ಸ್ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ.

ಇನ್ನು ವಿಷ್ಣುವರ್ಧನ್ ಜೊತೆಗೆ ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟು ಹಬ್ಬವೂ ಇಂದೇ ಆಗಿದೆ. ಅವರ ಅಭಿಮಾನಿಗಳು ನೆಚ್ಚಿನ ನಟ, ನಟಿಗೆ ಶುಭಾಶಯ ಕೋರುತ್ತಿದ್ದಾರೆ. ಉಪ್ಪಿಯ ಹೊಸ ಸಿನಿಮಾಗಾಗಿ ಕಾಯುತ್ತಿದ್ದಾರೆ. ನಟಿ ಶ್ರುತಿ ಸಹ ಭಜರಂಗಿ-2 ಚಿತ್ರದಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಇನ್ನು ಹಿರಿಯ ನಟಿ ಫಂಡರಿಬಾಯಿ ಅವರ ಹುಟ್ಟು ಹಬ್ಬವು ಸಹ ಇದ್ದು, ನಟರ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!