ಡ್ರಗ್ಸ್ ಪ್ರಕರಣ: ಬಿಗ್ ಬಾಸ್ ಮಾಜಿ ಸ್ಪರ್ಧಿ ಮನೆ ಮೇಲೆ ದಾಳಿ

284

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಹಲವು ಸಿನಿಮಾ ನಟ, ನಟಿಯರು, ರಾಜಕಾರಣಿ ಮಕ್ಕಳು, ಉದ್ಯಮಿಗಳು ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದಿದ್ದಾರೆ. ಈ ಪ್ರಕರಣ ಇನ್ನು ತನಿಖೆ ಹಂತದಲ್ಲಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ನಿವಾಸದ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಬಾಣಸವಾಡಿ ಎಸಿಪಿ ಸಕ್ರಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಿದ್ದ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ನೈಜಿರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗಿ ಮಸ್ತಾನ್ ಚಂದ್ರ ಹಾಗೂ ಕೇಶವ ಎನ್ನುವರು ಹೆಸರು ಬಾಯಿಬಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!