ಟೆಸ್ಟ್ ಗೆ ಡು ಪ್ಲೆಸಿಸ್ ಗುಡ್ ಬೈ

283

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೌಥ್ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಫಾಫ್ ಡು ಪ್ಲೆಸಿಸ್ ಟೆಸ್ಟ್ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. 2012, ನವೆಂಬರ್ 23ರಂದು ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಆಟಕ್ಕೆ ಎಂಟ್ರಿ ಕೊಟ್ಟರು. ಕಳೆದ 9 ವರ್ಷಗಳಿಂದ ಟೆಸ್ಟ್ ಆಡಿರುವ ಡು ಪ್ಲೆಸಿಸ್ ಇದೀಗ ನಿವೃತ್ತಿ ಘೋಷಿಸಿದ್ದಾರೆ.

ಇದುವರೆಗೂ 69 ಟೆಸ್ಟ್ ಪಂದ್ಯಗಳನ್ನ ಆಡಿರುವ ಡು ಪ್ಲೆಸಿಸ್ 4,163 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 21 ಅರ್ಧ ಶತಕಗಳಿವೆ. ಫೆಬ್ರವರಿ 4, 2021ರಂದು ಪಾಕ್ ವಿರುದ್ಧ ಆಡಿದ ಪಂದ್ಯ ಕೊನೆಯದಾಗಿದೆ. 36 ವರ್ಷದ ಆಟಗಾರ ಏಕದಿನ ಹಾಗೂ ಟಿ-20 ಪಂದ್ಯಗಳ ಮೇಲೆ ಗಮನ ಹರಿಸಲಿದ್ದಾರಂತೆ.




Leave a Reply

Your email address will not be published. Required fields are marked *

error: Content is protected !!