ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ವಾರ್ನರ್ ಮಾತು

208

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡೇವಿಡ್ ವಾರ್ನರ್ ಐಪಿಎಲ್ ಟೂರ್ನಿಯಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೂ ಹತ್ತಿರವಾದರು. ಅದರಲ್ಲೂ ಅವರು ಭಾರತೀಯ ಚಿತ್ರರಂಗದ ಹಾಡುಗಳಿಗೆ ರೀಲ್ಸ್ ಮಾಡಿ ಎಲ್ಲರ ಮನಸ್ಸು ಗೆದ್ದರು. ಇಂತಹ ವಾರ್ನರ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳುವ ಸಮಯ ಬಂದಿದೆ ಎಂದಿದ್ದಾರೆ.

ವಿಶ್ವಚಾಂಪಿಯನ್ ಶಿಪ್ ಅಭ್ಯಾಸ ಪಂದ್ಯದ ವೇಳೆ ಮಾತನಾಡಿದ ಅವರು, ವಿಶ್ವಚಾಂಪಿಯನ್ ಶಿಪ್ ನಲ್ಲಿ ರನ್ ಗಳಿಸಲು ಸಾಧ್ಯವಾದರೆ, ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಕ್ಕರೆ ಅದೆ ಕೊನೆಯ ಸರಣಿಯಾಗಲಿದೆ. ತವರು ಮೈದಾನವಾದ ಸಿಡ್ನಿಯಲ್ಲಿ ವಿದಾಯ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ಇನ್ನು 2024ರ ಟಿ-20 ವರ್ಲ್ಡ್ ಕಪ್ ಟೂರ್ನಿಯಲ್ಲಿ ಆಡಲು ಬಯಸುತ್ತೇನೆ. ಇದಕ್ಕೂ ಮೊದಲು ಸಾಕಷ್ಟು ಕ್ರಿಕೆಟ್ ಆಡಬೇಕು. ಐಪಿಎಲ್ ಮತ್ತು ಇತರೆ ಪ್ರಾಂಚೈಸ್ ಲೀಗ್ ಗಳಲ್ಲಿ ಆಡಬೇಕು. ಜೂನ್ ವರೆಗೂ ಲಯದಲ್ಲಿದ್ದರೆ ಸಾಕು. ಮುಂದೆ ನಾನು ಹಿಂತಿರುಗಿ ನ್ಯೂ ಸೌತ್ ವೇಲ್ಸ್ ಗಾಗಿ ಆಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

36 ವರ್ಷದ ಡೇವಿಡ್ ವಾರ್ನರ್ 102 ಟೆಸ್ಟ್ ಪಂದ್ಯಗಳಲ್ಲಿ 187 ಇನ್ನಿಂಗ್ಸ್ ಆಡಿದ್ದಾರೆ. 8,158 ರನ್ ಗಳಿಸಿದ್ದಾರೆ. 3 ದ್ವಿಶತಕ, 28 ಶತಕಗಳಿವೆ.




Leave a Reply

Your email address will not be published. Required fields are marked *

error: Content is protected !!