ಪ್ರಜಾಸ್ತ್ರ ಕ್ರೀಡಾ ಸುದ್ದಿ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ತಮ್ಮ ಕ್ರಿಯಾತ್ಮಕ ಚಟುವಟಿಕೆಯಿಂದ ಭಾರತೀಯರಿಗೆ ತುಂಬಾ ಹತ್ತಿರವಾಗಿದ್ದಾರೆ. ಅದರಲ್ಲೂ ಐಪಿಎಲ್ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುವುದರ ಜೊತೆಗೆ ಭಾರತೀಯ ಸಿನಿರಂಗದ ಹಾಡುಗಳಿಗೆ ರೀಲ್ಸ್, ಡ್ಯಾನ್ಸ್ ಮಾಡಿ ಎಲ್ಲರ ಪ್ರೀತಿ ಗಳಿಸಿದ್ದಾರೆ. ಇಂತಹ ವಾರ್ನರ್ ಇದೀಗ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಜೊತೆಯಾಗಿದ್ದಾರೆ.
ಕ್ರೆಡಿಟ್ ಯುಪಿಐವೊಂದರ ಜಾಹೀರಾತಿನಲ್ಲಿ ವಾರ್ನರ್ ಫುಲ್ ಮಿಂಚಿದ್ದಾರೆ. ಐತಿಹಾಸಿಕ ಪಾತ್ರಗಳ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಅವರ ಸ್ಟೈಲ್ ಅಭಿಮಾನಿಗಳಿಗೆ ಖುಷಿ ಕೊಡುತ್ತಿದೆ.