ಸಿಂದಗಿಯಲ್ಲಿ ಬೆಳಗಿನಜಾವ ಭೂಕಂಪ!

317

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ನಿವಾಸಿಗಳಿಗೆ ಶುಕ್ರವಾರ ಬೆಳಗಿನ ಜಾವ ಏಳು ಬಾರಿ ಭೂಮಿಕಂಪನದ ಅನುಭವವಾಗಿದ್ದು, ಆತಂಕಗೊಳ್ಳುವಂತಾಗಿದೆ. ಬೆಳಗಿನ ಜಾವ 4.30 ರಿಂದ 5.20 ರ ವೇಳೆ ಏಳು ಬಾರಿ ಭೂಮಿ ಕಂಪಿಸಿದಕ್ಕೆ ಬೆಚ್ಚಿಬಿದ್ದ ಮಂದಿ, ಮನೆಯಿಂದ ಹೊರ ಓಡಿಬಂದಿದ್ದಾರೆ. ಈ ಭೂಕಂಪನದ ಅನುಭವದಿಂದ ಸಾರ್ವಜನಿಕರು ಭೀತಿಗೊಳ್ಳುವಂತಾಗಿದೆ.

ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ವಿಜಯಪುರ ಜಿಲ್ಲೆಯ ಅನೇಕ‌ ಭಾಗಗಳಲ್ಲಿ ಭೂಕಂಪನದ ಅನುಭವ ಆಗುತ್ತಿದೆ. ಇದರಿಂದಾಗಿ ಜಿಲ್ಲೆಯ ಜನತೆ ಭಯದಿಂದ ಇರಬೇಕಾದ ಪರಿಸ್ಥಿತಿ ಬಂದಿದೆ ಅಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!