ಏಕ್ ಲವ್ ಯಾ ಸಿನಿಮಾ ಬಿಡುಗಡೆ ಮುಂದಕ್ಕೆ

222

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಚಿತ್ರ ಮಂದರಿಗಳಲ್ಲಿ ಶೇಕಡ 50ರಷ್ಟು ಮಾತ್ರ ಅವಕಾಶ ನೀಡಿದೆ. ಹೀಗಾಗಿ ಬಿಗ್ ಬಜೆಟ್ ಚಿತ್ರಗಳು ರಿಲೀಸ್ ದಿನಾಂಕ ಮುಂದೂಡುತ್ತಿದೆ.

ನಿರ್ದೇಶಕ ಜೋಗಿ ಪ್ರೇಮ್, ಆಕ್ಷನ್ ಕಟ್ ಹೇಳಿರುವ ಏಕ್ ಲವ್ ಯಾ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಹಾಡುಗಳು ಈಗಾಗ್ಲೇ ಸೂಪರ್ ಹಿಟ್ ಆಗಿವೆ. ಚಿತ್ರ ತಂಡ ಅಂದುಕೊಂಡಂತೆ ಆಗಿದ್ದಾರೆ ಜನವರಿ 21ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸರ್ಕಾರ ಸೆಮಿ ಲಾಕ್ ಡೌನ್ ಆದೇಶಿಸಿರುವುದರಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದ ಎಂದು ನಿರ್ದೇಶಕ ಜೋಗಿ ಪ್ರೇಮ್ ತಿಳಿಸಿದ್ದಾರೆ.

ಇದರ ಜೊತೆಗೆ ಇನ್ನು ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು ತೆರಿಗೆ ಬರಲು ರೆಡಿಯಾಗಿದ್ದವು. ಅದೆಲ್ಲವೂ ಇದೀಗ ಮುಂದೂಡುವ ಸ್ಥಿತಿ ನಿರ್ಮಾಣವಾಗಿದೆ. ಜನವರಿ 7ರಂದು ಆರ್ ಆರ್ ಆರ್ ಚಿತ್ರ ತೆರೆ ಕಾಣುತ್ತಿದೆ. ಅದರ ಕಥೆ ಏನು, ಶರಣ್ ನಟನೆಯ ಅವತಾರಪುರುಷ ಚಿತ್ರ ಸೇರಿ ಹಲವು ಚಿತ್ರಗಳ ಮೇಲೆ ಇದು ಪರಿಣಾಮ ಬೀರಲಿದೆ.




Leave a Reply

Your email address will not be published. Required fields are marked *

error: Content is protected !!