ಸಿಲಿಕಾನ್ ಸಿಟಿಯಲ್ಲಿ ಮತ್ತೆ ಆನ್ಲೈನ್ ಕ್ಲಾಸ್ ಶುರು

194

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಹೆಚ್ಚಾಗುತ್ತಿದೆ ಎಂದು ಸರ್ಕಾರದ ವರದಿ ಹೇಳುತ್ತಿದೆ. ಅದು ಅಲ್ದೇ, ಬೆಂಗಳೂರು ಡೇಂಜರ್ ಝೋನ್ ನಲ್ಲಿದ್ದು ನಾಳೆಯಿಂದ ಎರಡು ವಾರ ಶಾಲಾ, ಕಾಲೇಜುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಮತ್ತೆ ಆನ್ಲೈನ್ ಕ್ಲಾಸ್ ಗಳು ನಡೆಯಲಿವೆ.

ಶಾಲಾ, ಕಾಲೇಜುಗಳು ಶುರುವಾಗಿ ಬೌತಿಕವಾಗಿ ಪಾಠ ಕೇಳಲು ಶುರು ಮಾಡಿ ಎರಡ್ಮೂರು ತಿಂಗಳಾಗಿತ್ತು. ಅಷ್ಟರಲ್ಲಿ ಮತ್ತೆ ಸೆಮಿ ಲಾಕ್ ಡೌನ್, ಟಫ್ ರೂಲ್ಸ್ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಹೀಗಾಗಿ ಅನಿವಾರ್ಯವಾಗಿ ಆನ್ಲೈನ್ ಕ್ಲಾಸ್ ನಡೆಸಬೇಕಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಅನ್ನೋದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!