‘ಎಲ್ಲಿದ್ದೆ ಇಲ್ಲಿ ತನಕ’ ವಿಡಿಯೋ ಸಾಂಗ್ ರಿಲೀಸ್

564

ನಟ ಸೃಜನ ಲೋಕೇಶ ಮತ್ತು ನಟಿ ಹರಿಪ್ರಿಯಾ ಜೋಡಿಯ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಟೈಟಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಸೃಜನ ಮತ್ತು ಹರಿಪ್ರಿಯಾ ಇದೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಲೋಕೇಶ ಬ್ಯಾನರ್ ಅಡಿಯಲ್ಲಿ ಸಿನ್ಮಾ ನಿರ್ಮಾಣವಾಗ್ತಿದ್ದು, ಟೀಸರ್ ಮತ್ತು ಟೈಟಲ್ ಟ್ರ್ಯಾಕ್ ಈಗಾಗ್ಲೇ ರಿಲೀಸ್ ಆಗಿವೆ. ಗಾಯಕ ಸೋನು ನಿಗಮ್ ಹಾಡಿರುವ ಸಾಂಗ್ ನಲ್ಲಿ ಮಜಾ ಟಾಕೀಸ್ ಕಿಲಾಡಿ, ಲವರ್ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾನೆ.

ಸ್ಮಾಲ್ ಸ್ಕ್ರೀನ್ ನಲ್ಲಿ ಧೂಳ್ ಎಬ್ಬಿಸಿರುವ ಮಜಾ ಟಾಕೀಸ್ ಮಾತಿನ ಮಲ್ಲ, ಬಿಗ್ ಸ್ಕ್ರೀನ್ ಮೇಲೆ ವಿಭಿನ್ನವಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾನೆ. ಈ ಹಿಂದೆ ಕೆಲ ಸಿನ್ಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ರು ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ. ‘ಎಲ್ಲಿದ್ದೆ ಇಲ್ಲಿ ತನಕ’ ಸಿನ್ಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು ಸೃಜನ ಲೋಕೇಶ ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಖುಷಿ ಕೊಡಲಿದೆ ಅನ್ನೋದು ಚಿತ್ರ ತಂಡದ ಅಭಿಪ್ರಾಯ.




Leave a Reply

Your email address will not be published. Required fields are marked *

error: Content is protected !!